ಅಮೇರಿಕಾ, ಆ 01 (DaijiworldNews/HR): 7 ವರ್ಷದ ಬಾಲಕನ ಶವ ವಾಷಿಂಗ್ ಮಿಷನ್ನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಅಮೇರಿಕಾದಲ್ಲಿ ನಡೆದಿದೆ.
ಟ್ರಾಯ್ ಖೋಲಿಯಾರ್ ಎಂಬ ಬಾಲಕ ಸಂಜೆಯಿಂದ ಮನೆಯಿಂದ ನಾಪತ್ತೆಯಾಗಿದ್ದಾನೆ ಎಂಬ ದೂರು ಬಂದಿದ್ದು, ಮಗು ನಾಪತ್ತೆಯಾದಾಗ ತಂದೆ ಮನೆಯಲ್ಲೇ ಇದ್ದರೆ ತಾಯಿ ರಾತ್ರಿ ಪಾಳಿ ಮುಗಿಸಿಕೊಂಡು ಮನೆಗೆ ಮರಳಿದ್ದರು. ಮಗು ಇನ್ನೂ ಶಾಲೆ ಸಮವಸ್ತ್ರದಲ್ಲೇ ವಾಷಿಂಗ್ ಮಿಷನ್ ನಲ್ಲಿಯೇ ಪತ್ತೆಯಾಗಿದೆ.
ಇನ್ನು ಮಗುವನ್ನು ದಂಪತಿ 2019ರಲ್ಲಿ ದತ್ತು ಪಡೆದಿದ್ದು, ಟೆಕ್ಸಾಸ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಯಾರನ್ನೂ ಆರೋಪಿ ಎಂದು ಪರಿಗಣಿಸದೇ ತನಿಖೆ ಆರಂಭಿಸಿದ್ದಾರೆ.