ನ್ಯೂಜಿಲೆಂಡ್, ಆ 03 (DaijiworldNews/MS): ನ್ಯೂಜಿಲೆಂಡ್ನ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನಕ್ಕಿಟ್ಟಿದ್ದ ಉಪ್ಪಿನಕಾಯಿ ಎಂಬ ಶೀರ್ಷಿಕೆಯ ಕಲಾಕೃತಿಯೂ 4.93 ಲಕ್ಷ ರೂಪಾಯಿಯ ಭಾರಿ ಬೆಲೆಗೆ ಮಾರಾಟವಾಗಿದ್ದು ಇದೀಗ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಸೀಲಿಂಗ್ಗೆ ಹಾರಿದ ಉಪ್ಪಿನಕಾಯಿಯ ಒಂದು ತುಂಡನ್ನು ಒಳಗೊಂಡಿರುವ ವಿಲಕ್ಷಣ ಕಲಾಕೃತಿಯು ಆಸ್ಟ್ರೇಲಿಯಾದ ಕಲಾವಿದ ಮ್ಯಾಥ್ಯೂ ಗ್ರಿಫಿನ್ಗೆ ಅವರದಾಗಿದ್ದು, ಅವರು ಕಲಾಕೃತಿಯನ್ನು NZ$10,000 ಬೆಲೆಗೆ ಮಾರಾಟ ಮಾಡಿದ್ದಾರೆ.
ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿರುವ ಕಲಾಕೃತಿಯಲ್ಲಿ ಉಪ್ಪಿನಕಾಯಿ ಸೀಲಿಂಗ್ಗೆ ಅಂಟಿಕೊಂಡಿರುವುದನ್ನು ತೋರಿಸುತ್ತಿದ್ದು ಸಾಸ್ ನ ಜಿಗುಟು ಕಲೆಗಳೂ ಕೂಡಿಕೊಂಡಿದೆ. .
"ಮ್ಯಾಥ್ಯೂ ಗ್ರಿಫಿನ್, 'ಪಿಕ್ಕಲ್', 2022 ಮೆಕ್ಡೊನಾಲ್ಡ್ಸ್ ಚೀಸ್ಬರ್ಗರ್ನಿಂದ ಉಪ್ಪಿನಕಾಯಿಯ ಸ್ಲೈಸ್ ಸೀಲಿಂಗ್ಗೆ ಹಾರಿ ಶಿಲ್ಪವಾಗಿದೆ ಎಂದು" ಪೋಸ್ಟ್ನಲ್ಲಿ ಶೀರ್ಷಿಕೆ ಹಾಕಲಾಗಿದೆ.
"ಉಪ್ಪಿನಕಾಯಿ" ಹೆಸರಿನ ಕಲಾಕೃತಿ ಮೈಕೆಲ್ ಲೆಟ್ ಗ್ಯಾಲರಿಯಲ್ಲಿ ಪ್ರದರ್ಶನಕ್ಕಿದ್ದು ಇದರೊಂದಿಗೆ ಆಕ್ಲೆಂಡ್ನಲ್ಲಿ ಸಿಡ್ನಿಯ ಪ್ರದರ್ಶನದ ಫೈನ್ ಆರ್ಟ್ಸ್ನಲ್ಲಿನ ನಾಲ್ಕು ಹೊಸ ಕೃತಿಗಳಲ್ಲಿ "ಸೀಲಿಂಗ್ ನಲ್ಲಿ ಉಪ್ಪಿನಕಾಯಿ"ಯೂ ಒಂದಾಗಿದೆ.
ಕೆಲವರು ಇದನ್ನು "ಪ್ರತಿಭೆ" , "ಅದ್ಭುತ" ಎಂದು ಹೇಳಿ ಕಾಮೆಂಟ್ ಮಾಡಿದ್ರೆ ಇನ್ನೋರ್ವ , ನಾನು ಹದಿಹರೆಯದವನಾಗಿದ್ದಾಗ ಹೀಗೆ ಮಾಡಿದಾಗ ಮೆಕ್ಡೊನಾಲ್ಡ್ಸ್ನಿಂದ ಹೊರಹಾಕಲ್ಪಟ್ಟಿದ್ದೇನೆ, ಈಗ ಅದು ಅದ್ಬುತ ಕಲೆಯಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.