ಡೆನ್ವರ್, ಆ 04 (DaijiworldNews/MS): ಇದು ಅಮ್ಮ ಮಗಳ ಪಾಲಿನ ಮರೆಯಾಲಾಗದ ಕ್ಷಣ, ಕನಸು ನನಸಾದ ಗಳಿಗೆ.! ಸೌತ್ವೆಸ್ಟ್ ಏರ್ಲೈನ್ನಲ್ಲಿ ತಾಯಿ - ಮಗಳು ಇಬ್ಬರೂ ಪೈಲಟ್ ಆಗಿ ಸೇರಿಕೊಂಡು ಇಬ್ಬರು ಜೊತೆಯಾಗಿ ವಿಮಾನ ಹೃದಯಸ್ಪರ್ಶಿ ಕ್ಷಣದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ಕ್ಯಾಪ್ಟನ್ ಹಾಲಿ ಪೆಟಿಟ್ ಮತ್ತು ಫಸ್ಟ್ ಆಫೀಸರ್ ಕೀಲಿ ಪೆಟಿಟ್ ಸೌತ್ವೆಸ್ಟ್ ಏರ್ಲೈನ್ಸ್ನ ಮೊದಲ ತಾಯಿ-ಮಗಳ ಪೈಲಟ್ ಜೋಡಿಯಾಗಿದೆ. ಜುಲೈ 23 ರಂದು ಡೆನ್ವರ್ನಿಂದ ಸೇಂಟ್ ಲೂಯಿಸ್ ತೆರಳುವ 3658 ಫ್ಲೈಟ್ನ್ನು ಹಾಲಿ ಮತ್ತು ಕೀಲಿ ತಾಯಿ ಮಗಳ ಜೋಡಿ ಪೈಲೆಟ್ ಒಟ್ಟಿಗೆ ವಿಮಾನ ಚಲಾಯಿಸಿದ್ದಾರೆ. ತಾಯಿ ಮಗಳು ಒಟ್ಟಿಗೆ ಕಾಕ್ಪಿಟ್ ಹಂಚಿಕೊಂಡಿರುವ ಹಾಗೂ ಕ್ಯಾಪ್ಟನ್ ಹಾಲಿ ತನ್ನ ಮಗಳನ್ನು ವಿಮಾನದಲ್ಲಿ ಪ್ರಯಾಣಿಕರಿಗೆ ಪರಿಚಯಿಸಿದ ಕ್ಷಣ ಕ್ಯಾಮರಾದಲ್ಲಿ ಸೆರೆಯಾಗಿದ್ದು ಇದರ ಸುಂದರ ವಿಡಿಯೋ ಅನ್ನು ಸೌತ್ವೆಸ್ಟ್ ಏರ್ಲೈನ್ ಹಂಚಿಕೊಂಡಿದೆ.
"ಇಂದು ನನಗೆ ವಿಶೇಷ ದಿನವಾಗಿದೆ. ನಿಮ್ಮ ಫಸ್ಟ್ ಆಫೀಸರ್, ಸೌತ್ವೆಸ್ಟ್ ಏರ್ಲೈನ್ನ ತಂಡದ ಹೊಚ್ಚ ಹೊಸ ಸದಸ್ಯೆ ಮತ್ತು ನನ್ನ ಮಗಳು ಕೀಲಿಯನ್ನು ನಾನು ನಿಮಗೆ ಪರಿಚಯಿಸಲು ಬಯಸುತ್ತೇನೆ," ಎಂದು ಕ್ಯಾಪ್ಟನ್ ಹಾಲಿ ವೀಡಿಯೊದಲ್ಲಿ ಹೇಳಿದ್ದಾರೆ.
ಕೇವಲ ಎರಡು ವರ್ಷ ವಯಸ್ಸಿನವನಾಗಿದ್ದಾಗ ಕೀಲಿ ಪೈಲಟ್ ಆಗಲು ಬಯಸಿದ್ದು, ಮಗಳ ಕನಸಿಗೆ ಪೋಷಕರು ನೀರೆರೆದಿದ್ದರು. ಇನ್ನು ಸೌತ್ವೆಸ್ಟ್ ಏರ್ಲೈನ್ನಲ್ಲಿ ಹಾಲಿ ಪೆಟಿಟ್ 18 ವರ್ಷಗಳಿಂದ ಉದ್ಯೋಗದಲ್ಲಿದ್ದಾರೆ. ಮಗಳು ಕೀಲಿ 2017 ರಲ್ಲಿ ಸೌತ್ವೆಸ್ಟ್ ಏರ್ಲೈನ್ಸ್ನಲ್ಲಿ ಇಂಟರ್ನ್ಶಿಪ್ ಮುಗಿಸಿ, ಪೈಲೆಟ್ ಆಗುವ ಅಂತಿಮ ಗುರಿ ಸಾಧಿಸಿದ್ದಾರೆ
ಸದ್ಯ ಈ ತಾಯಿ ಮಗಳ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಎಲ್ಲರೂ ತಾಯಿ ಮಗಳ ಸಾಧನೆ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.