ಟೋಕಿಯೊ, ಆ 05 (DaijiworldNews/HR): ಜಾಗತಿಕ ಸಮುದಾಯದಿಂದ ತೈವಾನ್ ಅನ್ನು ಪ್ರತ್ಯೇಕಿಸಲು ನಾವು ಬಿಡುವುದಿಲ್ಲ ಎಂದು ಅಮೇರಿಕಾ ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೊಸಿ ಅವರು ಚೀನಾವನ್ನು ಉದ್ದೇಶಿಸಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಚೀನಾ ದೇಶವು ತೈವಾನ್ನವರು ಇತರ ಪ್ರದೇಶಗಳಿಗೆ ತೆರಳದಂತೆ ಅಥವಾ ಇತರ ದೇಶಗಳ ಜತೆ ಬಾಂಧವ್ಯ ಹೊಂದದಂತೆ ತಡೆಯಲು ಯತ್ನಿಸಬಹುದು. ಆದರೆ ಅವರು ತೈವಾನ್ ಅನ್ನು ವಿಶ್ವ ಸಮುದಾಯದಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂದರು.
ಇನ್ನು ನ್ಯಾನ್ಸಿ ಪೆಲೊಸಿ ತೈವಾನ್ಗೆ ಭೇಟಿ ನೀಡಿರುವುದನ್ನು ಖಂಡಿಸಿದ್ದ ಚೀನಾ ಬುಧವಾರವೇ ಆ ದೇಶದ ಮೇಲೆ ವ್ಯಾಪಾರ ನಿರ್ಬಂಧಗಳನ್ನು ಹೇರಲು ಆರಂಭಿಸಿದ್ದು, ಪೆಲೊಸಿ ತೈವಾನ್ ಭೇಟಿ ಬೆನ್ನಲ್ಲೇ ಚೀನಾದ ಫೈಟರ್ ಜೆಟ್ಗಳು ತೈವಾನ್ ಜಲಸಂಧಿಯನ್ನು ದಾಟಿ ಹಾರಾಟ ನಡೆಸಿದ್ದವು.