ಗಾಜಾ, ಆ 07 (DaijiworldNews/DB): ಗಾಜಾದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಆರು ಮಕ್ಕಳು ಸೇರಿದಂತೆ 24 ಮಂದಿ ಮೃತಪಟ್ಟಿದ್ದಾರೆ.
ಉಗ್ರರನ್ನು ಗುರಿಯಾಗಿಸಿಕೊಂಡು ಗಾಜಾ ಮತ್ತು ಪ್ಯಾಲೇಸ್ಟಿನ್ ಮೇಲೆ ಇಸ್ರೇಲ್ ಶುಕ್ರವಾರದಿಂದ ವೈಮಾನಿಕ ದಾಳಿ ನಡೆಸುತ್ತಿದೆ. ಈ ವೇಳೆ ಸಾಮಾನ್ಯ ನಾಗರಿಕರೂ ಇಸ್ರೇಲ್ ದಾಳಿಗೆ ಬಲಿಯಾಗಿದ್ದಾರೆ. ಮೃತಪಟ್ಟವರ ಪೈಕಿ ಆರು ಮಂದಿ ಮಕ್ಕಳು, ಇಬ್ಬರು ಮಕ್ಕಳೂ ಸೇರಿದ್ದಾರೆ. 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ದಾಳಿಯಲ್ಲಿ ಗಾಜಾ ಕಮಾಂಡರ್ ತೈಸೀರ್ ಅಲ್-ಜಬಾರಿ ಮೃತಪಟ್ಟಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಹೇಳಿರುವುದಾಗಿ ವರದಿಯಾಗಿದೆ.
ಇಸ್ರೇಲ್ ಸೇನೆ ಆಗಸ್ಟ್ 5ರಂದು ಗಾಜಾ ಪಟ್ಟಿಗೆ ಗುಂಡು ಹಾರಿಸಿತ್ತು. ಇದರಿಂದ ಅಲ್ಲಿ ಸಂಘರ್ಷ ಆರಂಭಗೊಂಡಿದೆ. ಇಸ್ರೇಲ್ ಹಾರಿಸಿದ ಗುಂಡಿಗೆ ಪ್ರತಿಯಾಗಿ ಗಾಜಾವು ಇಸ್ರೇಲ್ನ ಪ್ಯಾಲೇಸ್ಟಿನ್ ಮೇಲೆ ಬಾಂಬ್ ದಾಳಿ ನಡೆಸಿದೆ. ಬಳಿಕ ಗಾಜಾ ನಗರದ ವಸತಿ ಪ್ರದೇಶದಲ್ಲಿ ವಾಸವಾಗಿರುವ ಇಸ್ಲಾಮಿಕ್ ಜಿಹಾದ್ ಸದಸ್ಯನ ನಿವಾಸದ ಮೇಲೆ ಇಸ್ರೇಲ್ ಯುದ್ದ ವಿಮಾನಗಳು ಎರಡು ಬಾಂಬ್ಗಳನ್ನು ಹಾಕಿದೆ. ಬಾಂಬ್ ಹಾಕುವುದಕ್ಕೂ ಮೊದಲು ಆ ಪ್ರದೇಶದಲ್ಲಿರುವ ನಿವಾಸಿಗಳಿಗೆ ದೂರವಾಣಿ ಮುಖಾಂತರ ಎಚ್ಚರಿಕೆ ನೀಡಲಾಗಿತ್ತು ಎಂದು ವರದಿಗಳು ತಿಳಿಸಿವೆ.