ಫ್ಲೋರಿಡಾ, ಆ 09 (DaijiworldNews/HR): ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮನೆಯ ಮೇಲೆ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್ಬಿಐ) ದಾಳಿ ನಡೆಸಿದೆ.
ಟ್ರಂಪ್ ಅವರು ಅಧ್ಯಕ್ಷರಾಗಿದ್ದಾಗ ಫ್ಲೋರಿಡಾದ ಮನೆಗೆ ಕೆಲವು ಗೌಪ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ಇನ್ನು ರೆಸಾರ್ಟ್ ನ್ನು ಅಧಿಕಾರಿಗಳು ಮುತ್ತಿಗೆ ಹಾಕಿ ದಾಳಿ ಮಾಡಿ ವಶಪಡಸಿಕೊಳ್ಳಲಾಗಿದೆ ಎಂದು ಟ್ರಂಪ್ ಹೇಳಿದ್ದು ಯಾಕೆ ದಾಳಿ ಮಾಡಿದ್ದಾರೆ ಎಂದು ಬಹಿರಂಗ ಪಡಿಸಿಲ್ಲ.
ದಾಳಿ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಟ್ರಂಪ್, ಅಮೇರಿಕಾದಲ್ಲಿ ಈಗ ಕರಾಳ ಸಮಯ ನಡೆಯುತ್ತಿದೆ. ನನ್ನ ಸುಂದರವಾದ ಮನೆ, ಮಾರ್-ಎ-ಲೆಗೊ, ಪಾಮ್ ಬೀಚ್, ಫ್ಲೋರಿಡಾ ಮೇಲೆ ದಾಳಿ ಮಾಡಲಾಗುತ್ತಿದೆ ಎಂದಿದ್ದು, ಈ ದಾಳಿಯ ಬಗ್ಗೆ ಪ್ರತಿಕ್ರಿಯಿಸಲು ನ್ಯಾಯಾಂಗ ಇಲಾಖೆಯು ನಿರಾಕರಿಸಿದೆ.