ಲಂಡನ್, ಆ 17 (DaijioworldNews/HR): ಯುವತಿಯೊಬ್ಬಳು ಲಂಡನ್ ಏರ್ಪೋರ್ಟ್ನಲ್ಲಿ 4.8 ಲಕ್ಷ ರೂಪಾಯಿ ನಗದು, ಲಗೇಜ್ನೊಂದಿಗೆ ಶ್ಚಿತಾರ್ಥ ಮಾಡಿಕೊಂಡಿದ್ದವನನ್ನು ಬಿಟ್ಟು ಪರಾರಿಯಾಗಿರುವ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಒಂದು ದಿನದ ಹಿಂದಷ್ಟೇ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ವಾಶ್ ರೂಂಗೆ ಹೋಗಿಬರುವುದಾಗಿ ಹೇಳಿ ಹೋದ ಆಕೆ ಲಗೇಜ್ಗಳೊಂದಿಗೆ ಪರಾರಿಯಾಗಿದ್ದಳು.
ಇನ್ನು ಆಕೆ ನಾಪತ್ತೆಯಾಗಿದ್ದರ ಅನುಮಾನದಲ್ಲಿ ವರನು ಟರ್ಮಿನಲ್ ಸಿಬ್ಬಂದಿಗೆ ತಿಳಿಸಿದ ಬಳಿಕ ವಿಮಾನ ನಿಲ್ದಾಣದ ಎಲ್ಲೆಡೆ ಹುಡುಕಾಡಿದರು. ಆದರೆ ಆಕೆ ಎಲ್ಲಿಯೂ ಪತ್ತೆಯಾಗಲಿಲ್ಲ ಎನ್ನಲಾಗಿದೆ.