ವಾಷಿಂಗ್ಟನ್, ಆ 19 (DaijiworldNews/DB): ಲ್ಯಾಂಡಿಂಗ್ ವೇಳೆ ವಿಮಾನಗಳೆರಡರ ಮಧ್ಯೆ ಢಿಕ್ಕಿ ಸಂಭವಿಸಿದ ಘಟನೆ ಕ್ಯಾಲಿಫೋರ್ನಿಯಾದ ವ್ಯಾಟ್ಸನ್ ವಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಹಲವಾರು ಸಾವು ನೋವುಗಳಾಗಿರುವ ಶಂಕೆ ವ್ಯಕ್ತವಾಗಿದೆ.
ವ್ಯಾಟ್ಸನ್ ವಿಲ್ಲೆ ಮುನ್ಸಿಪಲ್ ಏರ್ಪೋರ್ಟ್ನಲ್ಲಿ ಲ್ಯಾಂಡಿಂಗ್ ಮಾಡಲು ಯತ್ನಿಸುತ್ತಿದ್ದಾಗ ಗುರುವಾರ ಘಟನೆ ನಡೆದಿದೆ. ಸಿಂಗಲ್-ಎಂಜಿನ್ ಸೆಸ್ನಾ 152 ಮತ್ತು ಅವಳಿ-ಎಂಜಿನ್ ಸೆಸ್ನಾ 340 ಪರಸ್ಪರ ಢಿಕ್ಕಿಯಾಗಿವೆ. ವಿಮಾನಗಳೆರಡರಲ್ಲಿ ಒಟ್ಟು 340 ಮಂದಿ ಪ್ರಯಾಣಿಕರಿದ್ದರು. ಹಲವರು ಸಾವನ್ನಪ್ಪಿರಬಹುದು ಎಂಬ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಆದರೆ ಸಾವು-ನೋವುಗಳ ಅಧಿಕೃತ ಮಾಹಿತಿಯನ್ನು ಈವರೆಗೆ ನೀಡಿಲ್ಲ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸುದ್ದಿ ಸಂಸ್ಥೆಯೊಂದು ವರಿದ ಮಾಡಿದೆ.
ಢಿಕ್ಕಿ ವೇಳೆ ಹೊರ ಭಾಗದಲ್ಲಿ ಹಲವು ಪ್ರಯಾಣಿಕರಿದ್ದರು. ಆದರೆ ಹೊರ ಭಾಗದಲ್ಲಿದ್ದವರಿಗೆ ಯಾವುದೇ ಗಾಯಗಳಾಗಿಲ್ಲ. ಎಫ್ಎಎ ಮತ್ತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಘಟನೆಯ ತನಿಖೆ ನಡೆಸುತ್ತದೆ. ಎನ್ಟಿಎಸ್ಬಿ ತನಿಖೆಯ ಉಸ್ತುವಾರಿ ವಹಿಸಲಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.