ಫಿನ್ಲೆಂಡ್ , ಆ 23 (DaijiworldNews/MS): ಪಾರ್ಟಿಯೊಂದರಲ್ಲಿ ಸ್ನೇಹಿತರೊಂದಿಗೆ ಪಾಲ್ಗೊಂಡು ಡ್ಯಾನ್ಸ್ ಮಾಡಿ ವಿವಾದಕ್ಕೀಡಾದ ಫಿನ್ಲೆಂಡ್ ಪ್ರಧಾನಿ ಸನ್ನಾ ಮಾರಿನ್, ಅವರು ಡ್ರಗ್ಸ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಪಡೆದುಕೊಂಡಿದ್ದಾರೆ.
ಫಿನ್ಲ್ಯಾಂಡ್ ಪ್ರಧಾನಿ ಸನ್ನಾ ಅವರು ತಮ್ಮ ಸೆಲೆಬ್ರಿಟಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಿ ವಿವಾದಕ್ಕೆ ಸಿಲುಕಿದ್ದರು. ಈ ಪಾರ್ಟಿಯಲ್ಲಿ ಡ್ರಗ್ಸ್ ಬಳಸಿರಬಹುದು ಎಂದು ವಿರೋಧ ಪಕ್ಷಗಳು ಗಂಭೀರ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಮರಿನ್ ಡ್ರಗ್ಸ್ ಪರೀಕ್ಷೆಗೆ ಒಳಗಾಗಿದ್ದರು.
ಖಾಸಗಿ ಪಾರ್ಟಿಯ ವಿಡಿಯೋ ಲೀಕ್ ಆಗಿರುವುದು ದುರದೃಷ್ಟಕರ. ಆಲ್ಕೋಹಾಲ್ ಹೊರತುಪಡಿಸಿ ಯಾವುದೇ ಡ್ರಗ್ಸ್ ತೆಗೆದುಕೊಂಡಿಲ್ಲ. ನಾವು ಮಾಡುವುದೆಲ್ಲವೂ ಕಾನೂನಿನ ವ್ಯಾಪ್ತಿಯಲ್ಲಿದೆ. ನಾವೇನೂ ತಪ್ಪು ಮಾಡಿಲ್ಲ ಹೀಗಾಗಿ ಡ್ರಗ್ಸ್ ಪರೀಕ್ಷೆಗೆ ಒಳಗಾಗಿದ್ದೇನೆ ಎಂದು ಮರಿನ್ ಪ್ರತಿಕ್ರಿಯಿಸಿದ್ದರು.
ಅವರ ರಕ್ತ ಮತ್ತು ಮೂತ್ರದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿ, ಕೊಕೇನ್, ಗಾಂಜಾ ಸಹಿತ ಯಾವುದಾದರೂ ಮಾದಕ ದ್ರವ್ಯ ಸೇವಿಸಿದ್ದರೆಯೇ ಎಂದು ಪರಿಶೀಲಿಸಲಾಗಿತ್ತು. ಆದರೆ, ಪ್ರಧಾನಿ ಮಾರಿನ್ ಅವರು ಯಾವುದೇ ಡ್ರಗ್ಸ್ ಸೇವಿಸಿಲ್ಲ. ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದು ಅವರ ವಿಶೇಷ ಸಲಹೆಗಾರರು ಹೇಳಿದ್ದಾರೆ.
ಜಗತ್ತಿನ ಅತ್ಯಂತ ಯುವ ಪ್ರಧಾನಿ ಎಂದೇ ಖ್ಯಾತರಾದ ಫಿನ್ಲ್ಯಾಂಡ್ ಪ್ರಧಾನಿ ಸನ್ನಾ ಮರಿನ್ ಈ ವಿಡಿಯೋದಿಂದಾದಗಿ ವಿವಾದಕ್ಕೆ ಸಿಲುಕಿದ್ದರು.