ನಾಸಾ, ಆ 23 (DaijiworldNews/MS): ಜೇಮ್ಸ್ ವೆಬ್ ಟೆಲಿಸ್ಕೋಪ್ನಲ್ಲಿ(JWST) ಸೆರೆಹಿಡಿಯಲಾದ ಗುರು ಗ್ರಹದ ಬೆರಗುಗೊಳಿಸುವ ಫೋಟೋವನ್ನು ನಾಸಾ ಬಿಡುಗಡೆ ಮಾಡಿದೆ.
ಜೇಮ್ಸ್ ವೆಬ್ ಸೆರೆಹಿಡಿದ ಚಿತ್ರದಿಂದ ವಿಜ್ಞಾನಿಗಳಿಗೆ ಗುರುಗ್ರಹದ ಅವಲೋಕನ ವೇಳೆ ಇನ್ನಷ್ಟು ಸುಳಿವುಗಳನ್ನು ನೀಡುತ್ತವೆ. ಈ ಚಿತ್ರದಲ್ಲಿ ಗುರುಗ್ರಹದ ಉಂಗುರಗಳು, ಸಣ್ಣ ಉಪಗ್ರಹಗಳು ಮತ್ತು ಗೆಲಕ್ಸಿಗಳ ವಿವರಗಳನ್ನು ಒಂದೇ ಚಿತ್ರದಲ್ಲಿ ನೋಡಬಹುದು
ಈಗ ಸೆರೆಹಿಡಿದಿರುವ ಗುರುಗ್ರಹದ ಚಿತ್ರದಲ್ಲಿ ಅಲಂಕಾರಿಕಾ ವಿನ್ಯಾಸಗಳನ್ನೂ ತೋರಿಸಿದೆ. ಜೊತೆಗೆ ಉತ್ತರ ಮತ್ತು ದಕ್ಷಿಣ ಧ್ರುವಗಳ ಮೇಲೆ ನೈಸರ್ಗಿಕ ಬೆಳಕಿನ ಪ್ರದರ್ಶನ(ಆರೋರಾ) ನೋಟವನ್ನೂ ಕಾಣುವಂತೆ ಗುರುತಿಸಿದೆ.
ಇನ್ನು ಇದರಲ್ಲಿ ಗ್ರೇಟ್ ರೆಡ್ ಸ್ಪಾಟ್, ಇದು ಭೂಮಿಯನ್ನು ನುಂಗಬಲ್ಲಷ್ಟು ದೊಡ್ಡದಾದ ಪ್ರಸಿದ್ಧ ಚಂಡಮಾರುತವಾಗಿದೆ, ಒಮ್ಮೆಗೆ ಮೋಡಗಳಂತೆ ಬಿಳಿಯಾಗಿ ಕಾಣುತ್ತದೆ, ಏಕೆಂದರೆ ಅವುಗಳು ಬಹಳಷ್ಟು ಸೂರ್ಯನ ಬೆಳಕನ್ನು ಪ್ರತಿಬಿಂಬಿಸುತ್ತವೆ.