ಶ್ರೀಲಂಕಾ, ಆ 24 (DaijiwroldNews/HR): ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಶ್ರೀಲಂಕಾವು ಈ ಬಿಕ್ಕಟ್ಟನ್ನು ನಿವಾರಿಸಲು ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದು, ಇದೀಗ ಚಾಕೊಲೇಟ್, ಸುಗಂಧ ದ್ರವ್ಯಗಳು, ಶಾಂಪೂಗಳು ಸೇರಿದಂತೆ 300 ವಸ್ತುಗಳ ಆಮದಿನ ಮೇಲೆ ನಿಷೇಧ ಹೇರಿದೆ.
ಸಾಂದರ್ಭಿಕ ಚಿತ್ರ
ಆಗಸ್ಟ್ 23 ರ ಮೊದಲು 300 ರೀತಿಯ ಸರಕುಗಳು ರಫ್ತು ಮಾಡಬೇಕು ಅವು ಸೆಪ್ಟೆಂಬರ್ 14 ರ ಮೊದಲು ಶ್ರೀಲಂಕಾವನ್ನು ತಲುಪುವ ಹಾಗೆ ನೋಡಿಕೊಳ್ಳಿ. ಅಂತವುಗಳನ್ನು ಮಾತ್ರ ಅನುಮತಿಸಲಾಗುತ್ತದೆ ಎಂದು ಶ್ರೀಲಂಕಾ ಸರ್ಕಾರ ಹೇಳಿದೆ.
ಇನ್ನು 1948 ರಲ್ಲಿ ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಶ್ರೀಲಂಕಾವು ಬಿಕ್ಕಟ್ಟಿನಲ್ಲಿ ಮುಳುಗಿದ್ದು, ಫಾರೆಕ್ಸ್ ಮೀಸಲು ಹದಗೆಟ್ಟಿದ್ದರಿಂದ ಅಗತ್ಯ ವಸ್ತುಗಳ ಕೊರತೆ ಉಂಟಾಗಿದೆ.