ಟೋಕಿಯೋ, ಅ 25 (DaijiworldNews/MS): ಜುಲೈನಲ್ಲಿ ಹತ್ಯೆಗೀಡಾದ ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ಭದ್ರತೆಯ ತನಿಖೆಯ ನಂತರ ಜಪಾನ್ನ ರಾಷ್ಟ್ರೀಯ ಪೊಲೀಸ್ ಏಜೆನ್ಸಿಯ ಮುಖ್ಯಸ್ಥ ಇಟಾರು ನಕಮುರಾ ಗುರುವಾರ ರಾಜೀನಾಮೆ ನೀಡಿದ್ದಾರೆ.
ಜುಲೈ 8 ರಂದು ಪ್ರಚಾರ ರ್ಯಾಲಿಯಲ್ಲಿ ಹತ್ಯೆಯಾದ ಮಾಜಿ ಪ್ರಧಾನಿ ಶಿಂಜೊ ಅವರ ಮೇಲೆ ನಡೆದ ಗುಂಡಿನ ದಾಳಿಯ ಹೊಣೆಗಾರಿಕೆಯನ್ನು ಹೊತ್ತು ರಾಜೀನಾಮೆ ಘೋಷಿಸಿದ್ದಾರೆ . ಶಿಂಜೊ ಅವರನ್ನು ರಕ್ಷಿಸುವಲ್ಲಿ ಪೊಲೀಸರ ವೈಫಲ್ಯಕ್ಕೆ ವಿಷಾದ ಅವರು ವ್ಯಕ್ತಪಡಿಸಿದ್ದು ಅಬೆಯವರ ರಕ್ಷಣಾ ಯೋಜನೆಯಲ್ಲಿ ದೋಷಗಳಿತ್ತು ಎಂದು ಇಟಾರು ನಕಮುರಾ ಅವರು ಒಪ್ಪಿಕೊಂಡಿದ್ದಾರೆ.
"ನಾವು ನಮ್ಮ ಸಿಬ್ಬಂದಿಯನ್ನು ಮತ್ತಷ್ಟು ಚುರುಕುಗೊಳಿಸಲು ಹಾಗೂ ನಮ್ಮ ಭದ್ರತಾ ಕರ್ತವ್ಯಗಳನ್ನು ಮತ್ತೆ ಹೊಸದಾಗಿ ಪ್ರಾರಂಭಿಸಲು ನಿರ್ಧರಿಸಿದ್ದೇವೆ ಅದಕ್ಕಾಗಿಯೇ ನಾನು ಇಂದು ರಾಷ್ಟ್ರೀಯ ಸಾರ್ವಜನಿಕ ಸುರಕ್ಷತಾ ಆಯೋಗಕ್ಕೆ ನನ್ನ ರಾಜೀನಾಮೆಯನ್ನು ಸಲ್ಲಿಸಿದ್ದೇನೆ" ಎಂದು ಇಟಾರು ನಕಮುರಾ ಸುದ್ದಿಗಾರರಿಗೆ ತಿಳಿಸಿದ್ದಾರೆ.