ಇಂಡೋನೇಷ್ಯಾ, ಆ 29 (DaijiworldNews/MS): ಇಂಡೋನೇಷ್ಯಾದಲ್ಲಿ ಇಂದು ಬೆಳಗ್ಗೆ ಭಾರೀ ಭೂಕಂಪನ ಉಂಟಾಗಿದೆ. ರಾಜಧಾನಿ ಸುಮಾತ್ರಾದ ಪಶ್ಚಿಮದಲ್ಲಿರುವ ಪರಿಮನ್ ಬಳಿ ಈ ಭೂಕಂಪನದ ಅನುಭವ ಆಗಿದ್ದು, ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ.
ಭೂಕಂಪದ ಕೇಂದ್ರವು ಭೂಮಿಯ ಒಳಭಾಗದಲ್ಲಿ 11.9 ಕಿಲೋ ಮೀಟರ್ ಆಳದಲ್ಲಿ ದಾಖಲಾಗಿದೆ. ಆದರೆ, ಹೆಚ್ಚು ತೀವ್ರವಾದ ಕಂಪನವು ಸಮುದ್ರದೊಳಗೆ ಸಂಭವಿಸಿದ್ದರೂ ಸುನಾಮಿ ಅಪಾಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸೋಮವಾರದ ಮುಂಜಾನೆಯಿಂದ ಮೂರು ಸತತ ಭೂಕಂಪಗಳು ಹೆಚ್ಚುತ್ತಿರುವ ತೀವ್ರತೆಯೊಂದಿಗೆ ಈ ಪ್ರದೇಶದಲ್ಲಿ ಕಂಡುಬರುತ್ತಿದೆ. ಮುಂಜಾನೆಯ ಮೊದಲು 5.2-ತೀವ್ರತೆಯ ಕಂಪನವು ದಾಖಲಾಗಿದೆ. ಆ ಬಳಿಕ ಒಂದು ಗಂಟೆಯ ನಂತರ 5.4-ತೀವ್ರತೆಯ ಭೂಕಂಪವು ಸಂಭವಿಸಿದೆ .
6.1 ತೀವ್ರತೆಯ ಭೂಕಂಪವನ್ನು ಮೆಂಟವಾಯ್ ದ್ವೀಪಗಳಲ್ಲಿ, ಪ್ರಾಂತೀಯ ರಾಜಧಾನಿ ಪಡಂಗ್ನಲ್ಲಿ ಮತ್ತು ಬುಕಿಟಿಂಗ್ಗಿಯ ಸುತ್ತಮುತ್ತಲಿನ ಪರ್ವತ ಪ್ರದೇಶದಲ್ಲಿ ನಿವಾಸಿಗಳು ಹಲವಾರು ಸೆಕೆಂಡುಗಳ ಕಾಲ ಬಲವಾಗಿ ಅನುಭವಿಸಿದ್ದಾರೆ ಎಂದು ಇಂಡೋನೇಷ್ಯಾದ ಹವಾಮಾನ ಮತ್ತು ಭೂಭೌತಶಾಸ್ತ್ರ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.