ಕರಾಚಿ (ಪಾಕಿಸ್ತಾನ), ಸೆ 01 (DaijiworldNews/DB):18 ವರ್ಷದ ಯುವತಿಯೊಬ್ಬಳು 55 ವರ್ಷದ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾದ ಪ್ರಸಂಗ ಪಾಕಿಸ್ತಾನದಲ್ಲಿ ನಡೆದಿದೆ. ಅಷ್ಟಕ್ಕೂ ಇವರಿಬ್ಬರ ಪ್ರೀತಿಗೆ ಸೇತುವಾದದ್ದು ಹುಡುಗಿ ಹಾಡುತ್ತಿದ್ದ ನನ್ನನ್ನು ಹೆಚ್ಚಿಗೆ ಭೇಟಿಯಾಗಬೇಡ ಹಾಡು!
ಪಾಕಿಸ್ತಾನದ 18 ವರ್ಷದ ಯುವತಿ ಮುಸ್ಕಾನ್ ಮತ್ತು 55 ವರ್ಷದ ವ್ಯಕ್ತಿ ಫಾರೂಕ್ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು. ದೊಡ್ಡ ವಯಸ್ಸಿನ ಅಂತರದಿಂದಾಗಿ ಇಬ್ಬರ ಮನೆಯಲ್ಲಿಯೂ ಮದುವೆಗೆ ಒಪ್ಪಿಗೆ ಇರಲಿಲ್ಲ. ಹೀಗಾಗಿ ಮನೆಯವರ ವಿರೋಧದ ನಡುವೆಯೇ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುದ್ದಿಯಾಗಿದ್ದಾರೆ.
ಸಂಗೀತ ಪ್ರೇಮಿಗಳಾದ ಇಬ್ಬರ ಮನೆಯೂ ಅಕ್ಕಪಕ್ಕದಲ್ಲೇ ಇತ್ತು. ಹಾಡುವುದು ಮುಸ್ಕಾನ್ ಹವ್ಯಾಸವಾಗಿತ್ತು. ಈಕೆ ನಟ ಬಾಬಿ ಡಿಯೋಲ್ ಅವರ ಬಾದಲ್ ಸಿನಿಮಾದ ನಾ ಮಿಲೋ ಹಮ್ಸೆ ಜಾದಾ (ನನ್ನನ್ನು ಹೆಚ್ಚಿಗೆ ಭೇಟಿಯಾಗಬೇಡ) ಹಾಡನ್ನು ಪ್ರತಿಸಲವೂ ಹಾಡುತ್ತಿದ್ದಳು. ಈ ಹಾಡನ್ನು ಕೇಳುತ್ತಿದ್ದ ಫಾರೂಕ್ಗೆ ಮುಸ್ಕಾನ್ ಮೇಲೆ ಪ್ರೀತಿ ಹುಟ್ಟಿದೆ. ಅವಿವಾಹಿತನಾಗಿದ್ದ ಆತ ಬಳಿಕ ಆತ ಮುಸ್ಕಾನ್ ಮನೆಗೆ ಬಂದು ಪ್ರೀತಿಸುತ್ತಿರುವ ವಿಷಯವನ್ನು ತಿಳಿಸಿದ್ದಾನೆ. ಇದಕ್ಕೆ ಒಪ್ಪಿಗೆ ನೀಡಿದ ಮುಸ್ಕಾನ್ ಫಾರೂಕ್ನನ್ನು ಪ್ರೀತಿಸಲು ಆರಂಭಿಸಿದ್ದಾಳೆ. ಬಳಿಕ ವಿಷಯ ಮನೆಯವರಿಗೂ ತಲುಪಿದ್ದು, ಅವರು ಇಬ್ಬರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ವಿರೋಧಗಳ ನಡುವೆಯೇ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಯೂಟ್ಯೂಬರ್ ಒಬ್ಬರು ಜೋಡಿಯನ್ನು ಸಂದರ್ಶನ ಮಾಡಿದ್ದು, ತಮ್ಮ ನಡುವೆ ಪ್ರೀತಿ ಹುಟ್ಟಿದ ರೀತಿಯನ್ನು ಸಂದರ್ಶನದಲ್ಲಿ ಇಬ್ಬರು ಹೇಳಿಕೊಂಡಿದ್ದಾರೆ.