ಇಂಗ್ಲೆಂಡ್, ಸೆ 04 (DaijiworldNews/DB): ರೆಸ್ಟೋರೆಂಟ್ವೊಂದರಲ್ಲಿ ಸವಿದ ಭಾರತೀಯ ಖಾದ್ಯದ ರುಚಿಗೆ ಮಾರುಹೋದ ಇಂಗ್ಲೆಂಡ್ ದಂಪತಿ ತಮ್ಮ ಮಗುವಿಗೆ ಅದೇ ಖಾದ್ಯದ ಹೆಸರನ್ನಿಟ್ಟ ಅಪರೂಪದ ಪ್ರಸಂಗ ಇಂಗ್ಲೆಂಡ್ನಲ್ಲಿ ನಡೆದಿದೆ. ಸದ್ಯ ಈ ಹೆಸರು ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಆಗಿದೆ.
ಐರ್ಲೆಂಡ್ನ ನ್ಯೂಟೌನಾಬ್ಬೆಯಲ್ಲಿರುವ ʼಕ್ಯಾಪ್ಟನ್ಸ್ ಟೇಬಲ್ʼ ರೆಸ್ಟೋರೆಂಟ್ಗೆ ಇತ್ತೀಚೆಗೆ ಭೇಟಿ ನೀಡಿದ್ದ ಇಂಗ್ಲೆಂಡ್ನ ದಂಪತಿ ಅಲ್ಲಿ ಭಾರತೀಯ ಖಾದ್ಯವಾದ ಪಕೋರಾವನ್ನು ಸವಿದಿದ್ದಾರೆ. ಈ ಖಾದ್ಯದ ರುಚಿಗೆ ಮಾರುಹೋದ ದಂಪತಿ ತಮ್ಮ ನವಜಾತ ಶಿಶುವಿಗೆ ಅದೇ ಹೆಸರನ್ನಿಟ್ಟಿದ್ದಾರೆ. ಈ ವಿಚಾರವನ್ನು ರೆಸ್ಟೋರೆಂಟ್ ತನ್ನ ಫೇಸ್ಬುಕ್ ಪೇಜ್ನಲ್ಲಿ ಘೋಷಿಸಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಕೋರಾವನ್ನು ಚಹಾದೊಂದಿಗೆ ಸೇವಿಸುವುದು ಸಾಮಾನ್ಯವಾಗಿದೆ. ಮಳೆಗಾಲಕ್ಕೆ ಹೇಳಿ ಮಾಡಿದ ತಿಂಡಿ ಇದು. ನವಜಾತ ಶಿಶುವಿನ ಫೋಟೋವನ್ನೂ ಪೋಸ್ಟ್ನಲ್ಲಿ ಹಂಚಿಕೊಂಡಿರುವ ರೆಸ್ಟೋರೆಂಟ್, ಖಾದ್ಯದ ಹೆಸರನ್ನಿರಿಸಿದ ಮೊದಲ ಮಗು ಇದು. ಪಕೋರಾಗೆ ಜಗತ್ತಿಗೆ ಸ್ವಾಗತ. ನಿಮ್ಮನ್ನು ಭೇಟಿ ಮಾಡಲು ಕಾಯಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ. ಪಕೋರಾ ಖಾದ್ಯದ ಬಿಲ್ ರಶೀದಿಯ ಫೋಟೋವನ್ನೂ ಜೊತೆಗೆ ಪೋಸ್ಟ್ ಮಾಡಲಾಗಿದೆ.