ಚೆಂಗ್ಡು, ಸೆ 06 (DaijiworldNews/MS): ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿದ್ದು, 40 ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ರಾಜಧಾನಿ ಚೆಂಗ್ಡು ನೈಋತ್ಯಕ್ಕೆ ಸುಮಾರು 226 k.m (110 ಮೈಲುಗಳು) ಪರ್ವತಗಳಲ್ಲಿರುವ ಪಟ್ಟಣವು ಲುಡಿಂಗ್ನಲ್ಲಿ ಕೇಂದ್ರಬಿಂದುವಾಗಿದೆ ಎಂದು ಚೀನಾ ಭೂಕಂಪ ನೆಟ್ವರ್ಕ್ಗಳ ಕೇಂದ್ರ ತಿಳಿಸಿದೆ.
2017ರ ಬಳಿಕ ಈ ಭಾಗದಲ್ಲಿ ಸಂಭವಿಸಿರುವ ಪ್ರಬಲ ಭೂಕಂಪ ಇದಾಗಿದೆ. ಭೂಕಂಪದ ಕೇಂದ್ರಬಿಂದುವಿನ ಸಮೀಪದ ರಸ್ತೆಗಳು ಹಾಗೂ ಮನೆಗಳಿಗೆ ಭೂಕುಸಿತದಿಂದ ಹಾನಿಯಾಗಿವೆ. ಭೂಕಂಪದ ಕೇಂದ್ರದಿಂದ 50 ಕಿಮೀ (31 ಮೈಲುಗಳು) ವ್ಯಾಪ್ತಿಯಲ್ಲಿರುವ ಅಣೆಕಟ್ಟು ಮತ್ತು ಜಲವಿದ್ಯುತ್ ಕೇಂದ್ರಗಳಿಗೆ ಯಾವುದೇ ಹಾನಿ ಸಂಭವಿಸಿಲ್ಲ. ಆದರೆ, ಸುಮಾರು 40,000 ಮನೆಗಳಿಗೆ ವಿದ್ಯುತ್ ಕಡಿತಗೊಂಡಿದೆ ಹಾಗೂ ಸಂಪರ್ಕ ಕಡಿತಗೊಂಡಿದೆ.
ಚೀನಾದ ಭೂಕಂಪನ ಸಂಪರ್ಕ ಕೇಂದ್ರದ ಪ್ರಕಾರ, ಲೂಡಿಂಗ್ ಪಟ್ಟಣದಲ್ಲಿ ಭೂಕಂಪದ ಕೇಂದ್ರಬಿಂದು ಆಗಿತ್ತು. ಭೂಮಿ ಕಂಪಿಸುತ್ತಿದ್ದಂತೆ ಜನರು ಮನೆಗಳಿಗೆ ರಸ್ತೆಗೆ ಓಡಿ ಬಂದರು. ವಸ್ತುಗಳು ಚೆಲ್ಲಾಪಿಲ್ಲಿಯಾದವು, ಕಟ್ಟಡಗಳು ಅಲುಗಾಡಿದವು ಹಾಗೂ ಭಾರಿ ಸದ್ದು ಕೇಳಿರುವುದು ವರದಿಯಾಗಿದೆ.