ವಾಷಿಂಗ್ಟನ್, ಸೆ 08 (DaijiworldNews/DB): ಭಾರತೀಯ ಮೂಲದ ವಕೀಲ ಅರುಣ್ ಸುಬ್ರಮಣಿಯನ್ ಅವರು ನ್ಯೂಯಾರ್ಕ್ನ ದಕ್ಷಿಣ ಜಿಲ್ಲೆಗೆ ಅಮೆರಿಕ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬಿಡನ್ ಅವರು ಈ ನೇಮಕ ಮಾಡಿದ್ದಾರೆ.
ನ್ಯೂಯಾರ್ಕ್ನ ಸುಸ್ಮಾನ್ ಗಾಡ್ಫ್ರೆ ಎಲ್ಎಲ್ಪಿಯ ಪಾಲುದಾರರಾಗಿರುವ ಸುಬ್ರಮಣಿಯನ್ ಅವರು ನ್ಯೂಯಾರ್ಕ್ನ ದಕ್ಷಿಣ ಜಿಲ್ಲೆಗೆ ಅಮೆರಿಕ ಜಿಲ್ಲಾ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಲಿರುವ ದಕ್ಷಿಣ ಏಷ್ಯಾದ ಮೊದಲ ನ್ಯಾಯಾಧೀಶ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕೇಸ್ ವೆಸ್ಟರ್ನ್ ರಿಸರ್ವ್ ವಿವಿಯಿಂದ 2001ರಲ್ಲಿ ಬಿಎ ಪದವಿ ಹಾಗೂ ಕೊಲಂಬಿಯಾ ಲಾ ಸ್ಕೂಲ್ನಿಂದ 2004ರಲ್ಲಿ ಜೆ.ಡಿ. ಪದವಿ ಪಡೆದಿರುವ ಸುಬ್ರಮಣಿಯನ್ ಗುಜರಾತ್ ಮೂಲದವರು. ಅಮೆರಿಕಾದ ಕ್ಯಾಲಿಫೋರ್ನಿಯಾ ವಿವಿಯಲ್ಲಿಯೂ ಪದವಿ ಗಳಿಸಿದ್ದಾರೆ. ಈ ಹುದ್ದೆಗೇರುತ್ತಿರುವ ಮೊದಲ ಭಾರತೀಯ ಅವರು. ಅಮೆರಿಕಾ ವಿದೇಶಾಂಗ ಇಲಾಖೆಯಲ್ಲಿ ಪ್ರಧಾನ ಉಪವಕ್ತಾರರೂ ಆಗಿರುವ ಅವರು ಜೋ ಬೈಡನ್ ಅವರಿಗೆ ಸಹಾಯಕ ಪತ್ರಿಕಾ ಕಾರ್ಯದರ್ಶಿ ಮತ್ತು ವಕ್ತಾರನಾಗಿಯೂ ಕರ್ತವ್ಯ ನಿಭಾಯಿಸಿದ ಅನುಭವಿ.