ಲಂಡನ್, ಸೆ 09 (DaijiworldNews/MS): ಸುದೀರ್ಘ ಏಳು ದಶಕಗಳ ಕಾಲ ಇಂಗ್ಲೆಂಡ್ ಆಳಿದ್ದ ರಾಣಿ ಎಲಿಜಬೆತ್-II ಅವರ ಗುರುವಾರ ರಾತ್ರಿ ನಿಧನರಾಗಿದ್ದಾರೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬ್ರಿಟನ್ನ ಬಲ್ಮೋರಾಲ್ನಲ್ಲಿ ಸೂಕ್ತ ವೈದ್ಯಕೀಯ ನಿಗಾದಡಿ ಇದ್ದ 96 ವರ್ಷದ ರಾಣಿ ಎಲಿಜಬೆತ್- II ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ವಯೋಸಹಜ ಕಾ ಯಿಲೆಗಳಿಂದ ಬಳಲುತ್ತಿದ ರಾಣಿ ಎಲಿಜಬೆತ್-II ಅವರು ಈ ವಾರದ ಆರಂಭದಲ್ಲಿ ಸ್ಕಾಟ್ಲೆಂಡ್ನಲ್ಲಿ ಹೊಸ ಪ್ರಧಾನಿ ಲಿಜ್ ಟ್ರಸ್ ಅವರ ನೇಮಕ ಸೇರಿದಂತೆ ತಮ್ಮ ಹಲವು ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದರು.
ಎಲಿಜಬೆತ್-II ಅವರು 1953 ರಿಂದ ಬ್ರಿಟನ್ ರಾಣಿಯಾಗಿ ೭೦ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಎಲಿಜಬೆತ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಯುಕೆಯಾದ್ಯಂತ ೧೦ ದಿನಗಳ ಶೋಕಾಚರಣೆ ನಡೆಯಲಿದೆ. ಇವರು ೧೯೫೨ ಫೆ ೬ ರಂದು ತಮ್ಮ ೨೫ ನೇ ವಯಸ್ಸಿನಲ್ಲಿ ರಾಣಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅವರ ಅಧಿಕಾರವಧಿಯಲ್ಲಿ ೧೫ ಪ್ರಧಾನಿಗಳನ್ನು ನೋಡಿದ್ದಾರೆ