ಫೆ.7(MSP): ಪಶ್ಚಿಮ ಆಫ್ರಿಕಾದ ಸೆನಗಲ್ನಲ್ಲಿ ಬಂಧಿತನಾಗಿರುವ ಭೂಗತ ಪಾತಕಿ ರವಿ ಪೂಜಾರಿಯನ್ನು ಖೆಡ್ಡಾಕ್ಕೆ ಕೆಡವಿದ ಹಲವು ವಿವರಗಳು ರೋಚಕವಾಗಿದೆ. 1992ರಿಂದ ಭೂಗತನಾಗಿದ್ದ ರವಿ ಪೂಜಾರಿಯನ್ನು ಬಂಧಿಸಬೇಕು ಎಂದು ಹೊರಟ ಪೊಲೀಸ್ ಇಲಾಖೆಗೆ ಮೊದಲ ಸವಾಲು ಎದುರಾಗಿದ್ದು, "ಡಾನ್ ರವಿ ನೋಡಲು ಹೇಗಿದ್ದಾನೆ " ಎಂದೇ ತಿಳಿದಿರಲಿಲ್ಲ. ಹೌದು ಭೂಗತನಾಗಿದ್ದ ರವಿ ಪೂಜಾರಿಯ ಎರಡು ದಶಕಕ್ಕಿಂತಲೂ ಹಿಂದಿನ ಪೋಟೋ ಬಿಟ್ಟರೆ ಪೊಲೀಸರಲ್ಲಿ ಇನ್ಯಾವುದೇ ಮಾಹಿತಿ ಇರಲಿಲ್ಲ.
ಇಲಾಖೆ ಇನ್ನಷ್ಟು ಮಾಹಿತಿ ಕಲೆಹಾಕತೊಡಗಿದಾಗ 2018ರ ಜೂನ್ ವೇಳೆಗೆ ಪೂಜಾರಿಯ ಮನೆ ಬರ್ಕಿನೋಫಾಸೋದಲ್ಲಿ ಇದೆ ಎನ್ನುವ ಮಹತ್ವದ ಸುಳಿವು ಲಭ್ಯವಾಯಿತು. ಆದರೆ 1992ರ ಈತನ ಮುಖ ಚರ್ಯೆಯನ್ನು ಭಾರತೀಯ ಪೊಲೀಸರೇ ಕಂಡಿರಲಿಲ್ಲ. ಹೀಗಾಗಿ ಈತ ಈಗ ಹೇಗಿರಬಹುದು ಎನ್ನುವುದು ಅಗತ್ಯವಾಗಿ ಪೊಲೀಸರಿಗೆ ಕಂಡಿತು. ಕೊನೆಗೆ ಇದರ ಹುಡುಕಾಟದ ಫಲವಾಗಿ ಸೆನೆಗಲ್ನ ರಾಜಧಾನಿ ಡಕಾರ್ನಲ್ಲಿರುವ ರವಿ ಪೂಜಾರಿ ಮಾಲಿಕತ್ವದ 'ನಮಸ್ತೆ ಇಂಡಿಯಾ' ಹೋಟೆಲ್ನಲ್ಲಿ ೨೦೧೮ ರ ನವರಾತ್ರಿ ದಿನ ಪೂಜಾರಿ ತನ್ನ ಸಹಚರರ ಜತೆ ಡ್ಯಾನ್ಸ್ ಮಾಡಿದ್ದ ವೀಡಿಯೋ ಪೊಲೀಸರ ಕೈಗೆ ಸೇರಿತ್ತು. ಇದರಾಚೆಗೆ ಅತನ ಬೇಟೆ ಕಾರ್ಯ ಇನ್ನಷ್ಟು ಚುರುಕುಗೊಂಡಿತು.
ಡ್ಯಾನ್ಸ್ ಮಾಡಿದ ದೃಶ್ಯಾವಳಿಯಲ್ಲಿದ್ದ ರವಿ ಪೂಜಾರಿಯ ಮುಖ ಹೋಲುವ ಪಾಸ್ಪೋರ್ಟ್ ಯಾವ ಹೆಸರಿನಲ್ಲಿದೆ ಎನ್ನುವ ಹುಡುಕಾಟ ಶುರುವಾಯಿತು. ಕೊನೆಗೆ ಮಂಡ್ಯದ ಅಂತೋಣಿ ಫರ್ನಾಂಡೀಸ್ ಹೆಸರಿನ ಪಾಸ್ ಪೋರ್ಟ್ ನಲ್ಲಿದ್ದ ಮುಖ ಚರ್ಯೆ ಸ್ವಲ್ಪ ಹೊಂದಾಣಿಕೆ ಆಗುತ್ತಿತ್ತು. ಪಾಸ್ಪೋರ್ಟ್ನಲ್ಲಿದ್ದ ನೋಂದಣಿ ಸಂಖ್ಯೆ ಮೂಲಕ ಆತ ಸೆನೆಗಲ್ ಪ್ರಜೆ ಎಂಬುದು ಖಚಿತವಾಯಿತು. ಅದರಲ್ಲಿನ ಹೆಸರು ಟೋನಿ ಫರ್ನಾಂಡೀಸ್ ಆಗಿತ್ತು. ಅಲ್ಲಿಗೆ ಪೂಜಾರಿಯ ಬಗ್ಗೆ ಸಿಕ್ಕ ಒಂದಷ್ಟು ಮಾಹಿತಿಗಳು ಒಂದಕ್ಕೊಂದು ಹೊಂದಾಣಿಕೆಯಾಗಲಾರಂಭಿಸಿತು.
ಒಂದು ಫೋಟೊ ಕೊಟ್ಟಿತು ಬಲವಾದ ಸುಳಿವು
ವಿದೇಶಿದಲ್ಲಿದ್ದ ಭಾರತೀಯ ಮಾಹಿತಿದಾರನೊಬ್ಬನ ಮೂಲಕ ಪೂಜಾರಿ ಕಾರ್ಯಕ್ರಮವೊಂದರಲ್ಲಿ ಕುಳಿತಿದ್ದ ಗ್ರೂಪ್ ಫೋಟೊ ಗುಪ್ತಚರ ಇಲಾಖೆಗೆ ಬಂತು.ಆದರೆ ಈ ಚಿತ್ರದಲ್ಲಿ ಫೋಟೊದಲ್ಲಿ ಸುಳಿವು ಸಿಗಬಹುದಾದ ಮಾಹಿತಿಗಳ ಆ ಪೋಟೋ ಎಲ್ಲಿಯದು ಎನ್ನುವುದು ಗೊತ್ತಾಗುತ್ತಿರಲಿಲ್ಲ. ಹೀಗಾಗಿ ಪೊಲೀಸರು ಇನ್ನಷ್ಟು ತಲೆಕೆಡಿಸಿಕೊಳ್ಳಬೇಕಾಯಿತು. ಆದರೆ ಪೂಜಾರಿ ಸನಿಹದಲ್ಲಿ ಕುಳಿತಿದ್ದಾತ ಧರಿಸಿದ್ದಾತನನ್ನು ಸೂಕ್ಷ್ಮವಾಗಿ ಗಮನಿಸಿದಾಗ ಆತ ಯಾವುದೋ ಹೊರಾಂಗಣ ಕ್ರೀಡೆಯನ್ನು ನೋಡುವ ಪ್ರೇಕ್ಷಕನಂತೆ ಕಾಣುತ್ತಿದ್ದ ಇದಾದ ನಂತರ ಇಲಾಖೆ ಅಧಿಕಾರಿಗಳು ಕಲೆಹಾಕಿದ ಇನ್ನೊಂದು ಫೋಟೊದಲ್ಲಿ ರವಿ ಪೂಜಾರಿ ಎದ್ದುನಿಂತು ಕ್ರಿಕೆಟರ್ಗಳಿಗೆ ಪ್ರಶಸ್ತಿ ನೀಡುತ್ತಿದ್ದ ದೃಶ್ಯವಿತ್ತು. ಆತನ ಪಕ್ಕದಲ್ಲಿದ್ದ ವ್ಯಕ್ತಿ ಧರಿಸಿದ್ದ ಟೀ ಷರ್ಟ್ ಮೇಲೆ 'ಇಂಡಿಯನ್ ಸೆನೆಗಲ್ ಕ್ರಿಕೆಟ್ ಕ್ಲಬ್' ಎಂದು ಬರೆದಿತ್ತು. ಈ ಕ್ರಿಕೆಟ್ ಪಂದ್ಯಾವಳಿ ಆಯೋಜಕರ ಹುಡುಕಾಟದ ಸಂದರ್ಭ ರವಿ ಟೋನಿಯಾಗಿ ತನ್ನ ದಂಧೆಗೆ ಬಳಸುತ್ತಿದ್ದ ಮೊಬೈಲ್ ಸಂಖ್ಯೆ ಮಹತ್ವದ ಸುಳಿವಾಗಿ ದೊರಕಿತು. ಈ ಮೂಲಕ ಆತನನ್ನು ಖೆಡ್ದಾಕ್ಕೆ ಕೆಡವಲು ನೆರವಾಯಿತು.
ಸೆನಗಲ್ ನಲ್ಲಿ ಕಾನೂನು ಹೋರಾಟಕ್ಕೆ ಮುಂದಾದ ಡಾನ್
ಇಷ್ಟಾದರೂ, ರವಿ ಪೂಜಾರಿ ಭಾರತೀಯ ಪೊಲೀಸರ ಕೈಯಿಂದ ತಪ್ಪಿಸುಕೊಳ್ಳುವ ಎಲ್ಲಾ ಪ್ರಯತ್ನವನ್ನು ಮಾಡುತ್ತಿದ್ದು, ಸೆನಗಲ್ ಪೊಲೀಸರ ಮುಂದೆ ಕಾನೂನು ಹೋರಾಟ ಮಾಡಿ ಅಲ್ಲಿಂದ ತಪ್ಪಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದಾನೆ ಎನ್ನಲಾಗಿದೆ. ಸೆನಗಲ್ ಸೇರಿದಂತೆ ಪಶ್ಚಿಮ ಆಫ್ರಿಕಾದ ಹಲವು ದೇಶಗಳಲ್ಲಿ ಸ್ಥಳೀಯ ಉದ್ಯಮಿಗಳ ಪಾಲುದಾರಿಕೆಯನ್ನು ಹೊಟೇಲ್ ಸೇರಿದಂತೆ ನಾನಾ ರೀತಿಯ ಉದ್ಯಮ ನಡೆಸುತ್ತಿದ್ದಾನೆ. ಹೀಗಾಗಿ ತಾನೊಬ್ಬ ಉದ್ಯಮಿ ಎಂದು ತೋರಿಸಿಕೊಂಡು ಭಾರತೀಯ ಪೊಲೀಸರು ಮಾಡುವ ಆರೋಪಗಳಿಂದ ಸೆನಗಲ್ನಿಂದ ಬಚಾವ್ ಆಗಲು ತನ್ನ ವ್ಯಾಪಾರ-ವಹಿವಾಟು ಪಾಲುದಾರರ ಸಹಾಯದೊಂದಿಗೆ ಕಾನೂನು ಹೋರಾಟಕ್ಕೆ ಸ್ಥಳೀಯ ವಕೀಲರನ್ನು ನೇಮಿಸಿಕೊಂಡಿದ್ದು, ಆತ ಹೇಗಾದರೂ ಮಾಡಿ ಪೊಲೀಸರ ಹಿಡಿತದಿಂದ ಪಾರಾಗುವ ಯತ್ನದಲ್ಲಿದ್ದಾನೆ.