ಉಕ್ರೇನ್, ಸೆ 10 (DaijiworldNews/HR): ಪೂರ್ವ ಉಕ್ರೇನ್ ನಗರದ ಬಖ್ಮುಟ್ನ ಮೇಲೆ ರಷ್ಯಾ ದಾಳಿ ನಡೆಸಿದ್ದು, ಅದರಲ್ಲಿ ಎಂಟು ಮಂದಿ ಸಾವನ್ನಪ್ಪಿ 17 ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ಈ ಕುರಿತು ಮಾಹಿತಿ ನೀಡಿರುವ ಡೊನೆಟ್ಸ್ಕ್ ಪ್ರಾದೇಶಿಕ ಗವರ್ನರ್ ಪಾವ್ಲೊ ಕಿರಿಲೆಂಕೊ, ರಷ್ಯಾ ದಾಳಿಯಲ್ಲಿ ವಸತಿ ಕಟ್ಟಡಗಳು, ಅಂಗಡಿಗಳು, ಸಾಂಸ್ಕೃತಿಕ ಭವನ ಮತ್ತು ಆಡಳಿತ ಕೇಂದ್ರ ಹಾಗೂ ಮಾರುಕಟ್ಟೆಗಳಿಗೆ ಹೆಚ್ಚಿನ ಹಾನಿಯಾಗಿದೆ ಎಂದಿದ್ದಾರೆ.
ಇನ್ನು ನಗರದಲ್ಲಿ ಕಳೆದ 4 ದಿನಗಳಿಂದ ನೀರು ಮತ್ತು ವಿದ್ಯುತ್ ಪೂರೈಕೆ ನಿಂತುಹೋಗಿದ್ದು, ರಷ್ಯಾದೊಂದಿಗೆ ನಡೆಯುತ್ತಿರುವ ಹೋರಾಟದಿಂದಾಗಿ ದುರಸ್ತಿ ಅಸಾಧ್ಯವಾಗಿದೆ ಎಂದು ಹೇಳಿದ್ದಾರೆ.