ಕೈವ್, ಸೆ 15 (DaijiworldNews/MS): ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಅವರು ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ಉಕ್ರೇನಿಯನ್ ಮಾಧ್ಯಮ ಪೋರ್ಟಲ್ ದಿ ಕೈವ್ ಇಂಡಿಪೆಂಡೆಂಟ್ ವರದಿ ಮಾಡಿದೆ.
ಝೆಲೆನ್ಸ್ಕಿ ಅವರು ಖಾರ್ಕಿವ್ನಲ್ಲಿ ತಮ್ಮ ಸೇನೆ ವಶಪಡಿಸಿಕೊಂಡ ಇಜಿಯಮ್ ನಗರಕ್ಕೆ ಭೇಟಿ ನೀಡಿದ ನಂತರ ಕೈವ್ಗೆ ತೆರಳುತ್ತಿದ್ದರು, ಅಲ್ಲಿ ಅವರು ಉಕ್ರೇನಿಯನ್ ಪಡೆಗಳನ್ನು ಭೇಟಿ ಮಾಡಿದ್ದರು.
ಖಾರ್ಕಿವ್ ಪ್ರದೇಶದಿಂದ ವಾಪಾಸ್ ಆಗುತ್ತಿದ್ದ ಸಂದರ್ಭ ಕೈವ್ನಲ್ಲಿ, ಪ್ರಯಾಣಿಕರ ಕಾರು ಉಕ್ರೇನ್ ಅಧ್ಯಕ್ಷರ ಕಾರು ಮತ್ತು ಬೆಂಗಾವಲು ವಾಹನಗಳಿಗೆ ಢಿಕ್ಕಿ ಹೊಡೆದಿದೆ ಎಂದು ಝೆಲೆನ್ಸ್ಕಿ ಅವರ ವಕ್ತಾರ ಸೆರ್ಗಿ ನಿಕಿಫೊರೊವ್ ಫೇಸ್ಬುಕ್ನಲ್ಲಿ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಝೆಲೆನ್ಸ್ಕಿ ಜೊತೆಯಲ್ಲಿರುವ ವೈದ್ಯಕೀಯ ತಂಡ ಅಪಘಾತದ ನಂತರ ಝೆಲೆನ್ಸ್ಕಿಯವರನ್ನು ಪರೀಕ್ಷಿಸಿದ್ದು ಗಂಭೀರವಾದ ಗಾಯಗಳಿಂದ ಪಾರಾದ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಅಪಘಾತದ ಬಗ್ಗೆ ಸಂಪೂರ್ಣವಾಗಿ ಕಾನೂನಾತ್ಮಕ ತನಿಖೆ ನಡೆಸಲಾಗುತ್ತಿದೆ ಎಂದು ನಿಕಿಫೊರೊವ್ ಹೇಳಿದ್ದಾರೆ.