ವಾಷಿಂಗ್ಟನ್,ಫೆ 8(MSP): ಜನರು ಅಮೆರಿಕಾಕ್ಕೆ ಬರಲು ನಾನು ಬಯಸುತ್ತೇನೆ, ಆದರೆ ಅವರ ಪ್ರವೇಶ ಕಾನೂನುಬದ್ಧವಾಗಿರಬೇಕು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅವರು ಸ್ಟೇಟ್ ಆಫ್ ಯೂನಿಯನ್ ಭಾಷಣದಲ್ಲಿ ಮಾತನಾಡುತ್ತಾ ಅರ್ಹತೆ ಆಧಾರಿತ ವಲಸೆ ಬಗ್ಗೆ ಇರುವ ತಮ್ಮ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಕಾನೂನುಬದ್ದವಾಗಿ ವಾಸಿಸುವ ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಅಮೆರಿಕಾದಲ್ಲಿದ್ದು ಅವರು ನಮ್ಮ ದೇಶವನ್ನು ಶ್ರೀಮಂತಗೊಳಿಸಿದ್ದಾರೆ. ಸಾವಿರಾರು ಭಾರತೀಯ ಐಟಿ ವೃತ್ತಿಪರರು ಅಮೆರಿಕಾಕ್ಕೆ ಕೊಡುಗೆಗಳನ್ನು ನೀಡಿದ್ದಾರೆ. ಆದರೆ ಇವರಿಗೆಲ್ಲರಿಗೂ ವಲಸೆ ನೀತಿಯಿಂದ ಭಾರೀ ಆಘಾತವಾಗಿದೆ. ಹೆಚ್ಚಿನ ವೃತ್ತಿಪರರು H-1B ವೀಸಾಗಳಲ್ಲಿ ನಮ್ಮ ದೇಶದಲ್ಲಿ ವಾಸವಿದ್ದಾರೆ. ಆದರೆ ಅಮೆರಿಕಾ ಜಾರಿಗೆ ತಂದ ವಲಸೆ ನೀತಿಯಿಂದ ಒಂದು ದೇಶದ ಶೇಕಡ ಏಳರಷ್ಟು ಜನರಿಗೆ ಮಾತ್ರ ಗ್ರೀನ್ ವೀಸಾದಡಿ ಅಮೆರಿಕಾದಲ್ಲಿ ಖಾಯಂ ವಾಸ್ತವ್ಯಕ್ಕೆ ಅವಕಾಶ ನೀಡಲಾಗುತ್ತದೆ. ಯಾಕೆಂದರೆ ಎಲ್ಲಕ್ಕಿಂತಲೂ ಮುಖ್ಯವಾಗಿ ’ನಮ್ಮ ದೇಶದ ನಾಗರಿಕರ ಜೀವನ ಮತ್ತು ಉದ್ಯೋಗಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಈ ರೀತಿಅ ವಲಸೆ ನೀತಿಯನ್ನು ರಚಿಸಲು ನಾವು ಬದ್ದರಾಗಿದ್ದೇವೆ' ಟ್ರಂಪ್ ಹೇಳಿದ್ದಾರೆ.