ಅಪ್ಘಾನಿಸ್ತಾನ, ಸೆ 15 (DaijiworldNews/DB): ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಪಾಕಿಸ್ತಾನದಲ್ಲಿದ್ದಾನೆ. ಅಪ್ಘಾನ್ ನಲ್ಲಿ ಇಲ್ಲ ಎಂದು ಅಪ್ಘಾನಿಸ್ತಾನದ ತಾಲಿಬಾನ್ ಹೇಳಿದೆ. ಆದರೆ ಆತ ಅಪ್ಘಾನ್ ನಲ್ಲೇ ಇದ್ದು, ಶೀಘ್ರ ಆತನನ್ನು ಬಂಧಿಸುವಂತೆ ಪಾಕ್ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಾಲಿಬಾನ್ ಗೆ ಪತ್ರ ಬರೆದಿದೆ. ಆ ಮೂಲಕ ಎರಡೂ ದೇಶಗಳೂ ಪರಸ್ಪರ ತಮ್ಮ ದೇಶದಲ್ಲಿಲ್ಲ, ನಿಮ್ಮ ದೇಶದಲ್ಲಿಯೇ ಆತ ಅಡಗಿದ್ದಾನೆ ಎಂಬುದಾಗಿ ಹೇಳಿಕೊಳ್ಳುತ್ತಿವೆ.
ಅಫ್ಘಾನ್ ನ ಕುನಾರ್ ಪ್ರಾಂತ್ಯ ಅಥವಾ ನಂಗ್ರಾಹರ್ ಪ್ರಾಂತ್ಯದಲ್ಲಿ ಮಸೂದ್ ಅಡಗಿರಬಹುದು ಎಂಬ ಪಾಕಿಸ್ತಾನದ ಹೇಳಿಕೆಗೆ ತೀಕ್ಷ್ಣ ವಾಗಿ ಪ್ರತಿಕ್ರಿಯಿಸಿರುವ ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್, ಪಾಕ್ ನಲ್ಲಿ ಅಡಗಿರುವ ಮಸೂದ್ ಅಜರ್ ವಿರುದ್ದ ಸೂಕ್ತ ಕ್ರಮಕ್ಕೆ ಪಾಶ್ಚಿಮಾತ್ಯ ದೇಶಗಳು ಒತ್ತಡ ಹೇರುತ್ತಿರುವ ಕಾರಣ ಪಾಕಿಸ್ತಾನವು ಆತ ನಮ್ಮ ದೇಶದಲ್ಲಿಲ್ಲ ಎಂದು ಹೇಳುತ್ತಿದೆ. ಆದರೆ ವಾಸ್ತವವಾಗಿ ಆತ ಅಲ್ಲೇ ಇದ್ದಾನೆ.ಆತನ ಸಂಘಟನೆಯೂ ಪಾಕ್ ಮೂಲದ್ದಾಗಿದೆ. ಪಾಕ್ ಮಾಡುತ್ತಿರುವ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ಹೇಳಿದ್ದಾರೆ.
ಸಾಕ್ಷ್ಯಾದಸಾರರಹಿತವಾದ ಇಂತಹ ಆರೋಪಗಳು ಪಾಕ್ ಮತ್ತು ಅಪ್ಘಾನ್ ನಡುವಿನ ಬಾಂಧವ್ಯವನ್ನು ಹಾಳು ಮಾಡುತ್ತದೆ ಎಂದು ಪಾಕ್ ನ ವಿದೇಶಾಂಗ ಸಚಿವಾಲಯವು ಪ್ರತಿಕ್ರಿಯಿಸಿದೆ.