ಲಂಡನ್, ಸೆ 16 (DaijiworldNews/DB): ಇಂಗ್ಲೆಂಡ್ನ ರಾಣಿ 2ನೇ ಎಲಿಜಬೆತ್ ಪಾರ್ಥಿವ ಶರೀರವನ್ನು ಲಂಡನ್ನ ವೆಸ್ಟ್ಮಿನಿಸ್ಟರ್ ಅಬೆಯಲ್ಲಿ ಪತಿ ರಾಜಕುಮಾರ್ ಫಿಲಿಪ್ ಅವರ ಸಮಾಧಿ ಪಕ್ಕದಲ್ಲೇ ರಾಣಿ ಸಮಾಧಿ ಮಾಡಲಾಗುವುದು ಎಂದು ರಾಜಕುಟುಂಬ ತಿಳಿಸಿದೆ.
ಸೋಮವಾರ ಸ್ಥಳೀಯ ಕಾಲಮಾನ ಬೆಳಗ್ಗೆ 11 ಗಂಟೆಗೆ ರಾಣಿ 2ನೇ ಎಲಿಜಬೆತ್ ಅಂತ್ಯಕ್ರಿಯೆ ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ವೆಸ್ಟ್ಮಿನಿಸ್ಟರ್ ಅಬೆ ಬಾಗಿಲುಗಳನ್ನು ತೆರೆಯಲಾಗುತ್ತದೆ. ಅಂತ್ಯಕ್ರಿಯೆಯ ಬಳಿಕ ಎರಡು ನಿಮಿಷ ಮೌನಪ್ರಾರ್ಥನೆ ನಡೆಯಲಿದೆ ಎಂದು ತಿಳಿದು ಬಂದಿದೆ.
ರಾಣಿ 2ನೇ ಎಲಿಜಬೆತ್ ಅವರ ಅಂತ್ಯಕ್ರಿಯೆಯಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ವಿಶ್ವದ ಸುಮಾರು 500 ಮಂದಿ ನಾಯಕರು ಹಾಗೂ 1,500 ಮಂದಿ ಅತಿಥಿಗಳು ಪಾಲ್ಗೊಳ್ಳಲಿದ್ದಾರೆ.
ರಾಣಿಯ ಪಾರ್ಥಿವ ಶರೀರ ಇರಿಸಲಾಗಿರುವ ವೆಸ್ಟ್ಮಿನಿಸ್ಟರ್ ಹಾಲ್ನಲ್ಲಿ ರಾತ್ರಿ-ಹಗಲು ಕರ್ತವ್ಯನಿರತವಾಗಿರಲು ಭದ್ರತಾ ಸಿಬಂದಿಯನ್ನು ನಿಯೋಜಿಸಲಾಗಿದ್ದು, ಭದ್ರತಾ ಸಿಬಂದಿಯೋರ್ವರು ತಲೆ ತಿರುಗಿ ಬಿದ್ದ ಘಟನೆ ಗುರುವಾರ ನಡೆದಿದೆ ಎಂದು ವರದಿಯಾಗಿದೆ.