ನಾಸಾ, ಸೆ 16 (DaijiworldNews/MS): ನಾಸಾದ ಪರ್ಸೆವೆರೆನ್ಸ್ ರೋವರ್ ಮಂಗಳ ಗ್ರಹದಲ್ಲಿ ಪುರಾತನ ನದಿ ಡೆಲ್ಟಾ ಅಸ್ತಿತ್ವದ ಕುರಿತು ಸಂಶೋಧನೆ ನಡೆಸುತ್ತಿದ್ದು, ಈ ಪ್ರದೇಶವು ಸಾವಯವ ಪದಾರ್ಥಗಳಿಂದ ತುಂಬಿತ್ತು ಎಂದು ಸೂಚಿಸುವ ಕುರುಹುಗಳನ್ನು ಕಂಡುಕೊಂಡಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಲೇಯರ್ಡ್ ಸೆಡಿಮೆಂಟರಿ ಬಂಡೆಗಳಿಂದ ಮಾಡಿದ ಸ್ಕಿನ್ನರ್ ರಿಡ್ಜ್ ಎಂಬ ಪ್ರದೇಶದಲ್ಲಿ ರೋವರ್ ಅಳತೆ ಮತ್ತು ಬಂಡೆ , ಮಣ್ಣಿನ ಮಾದರಿಗಳನ್ನು ತೆಗೆದುಕೊಂಡಿದೆ, ಅವುಗಳಲ್ಲಿ ಕೆಲವು ನೂರಾರು ಕಿಲೋಮೀಟರ್ ದೂರದಿಂದ ಶತಕೋಟಿ ವರ್ಷಗಳ ಹಿಂದೆ ಹರಿಯುವ ನೀರಿನಿಂದ ಸಾಗಿಸಲ್ಪಟ್ಟ ವಸ್ತುಗಳನ್ನು ಒಳಗೊಂಡಿದೆ ಎನ್ನಲಾಗಿದೆ.
ಅಲ್ಲದೆ, ಇತ್ತೀಚೆಗೆ ಸಂಗ್ರಹಿಸಿದ ಕೆಲವು ಮಾದರಿಗಳು ಸಾವಯವ ಪದಾರ್ಥಗಳನ್ನು ಒಳಗೊಂಡಿವೆ. ಇದು ಪುರಾತನ ಸರೋವರವನ್ನು ಹೊಂದಿದ್ದ ಜೆಜೆರೊ ಕ್ರೇಟರ್ ಹಾಗೂ ನಡಿ ಡೆಲ್ಟಾದ ಸನಿಹ 3.5 ಶತಕೋಟಿ ವರ್ಷಗಳ ಹಿಂದೆ ವಾಸಯೋಗ್ಯ ಪರಿಸರವನ್ನು ಹೊಂದಿತ್ತು ಎಂದು ಸೂಚಿಸುತ್ತದೆ.
18 ತಿಂಗಳ ಹಿಂದೆ ಅಂಗಾರಕನ ಅಂಗಳದಲ್ಲಿ ಪ್ರಾರಂಭವಾದ ರೋವರ್ನ ಕಾರ್ಯಾಚರಣೆಯು ಪ್ರಾಚೀನ ಸೂಕ್ಷ್ಮಜೀವಿಯ ಜೀವನದ ಅಸ್ತಿತ್ವವನ್ನು ಹುಡುಕುವುದನ್ನು ಒಳಗೊಂಡಿದೆ. ಇದಕ್ಕಾಗಿ ಬಯೋಸಿಗ್ನೇಚರ್ಗಳನ್ನು ಸಂರಕ್ಷಿಸಬಹುದಾದ ಬಂಡೆಯ ಮಾದರಿಗಳನ್ನು ಸಂಗ್ರಹಿಸುತ್ತಿದೆ. ಪ್ರಸ್ತುತ, ರೋವರ್ 12 ರಾಕ್ ಮಾದರಿಗಳನ್ನು ಸಂಗ್ರಹಿಸಿದೆ.
ಮಾರ್ಸ್ ಸ್ಯಾಂಪಲ್ ರಿಟರ್ನ್ ಎಂಬ ಮಿಷನ್ಗಳ ಸರಣಿಯು ಅಂತಿಮವಾಗಿ ಸಂಗ್ರಹವನ್ನು 2030 ರ ದಶಕದಲ್ಲಿ ಭೂಮಿಗೆ ಹಿಂತಿರುಗಿಸುತ್ತದೆ.