ಲಂಡನ್, ಸೆ 17 (DaijiworldNews/DB): ರಾಣಿ 2ನೇ ಎಲಿಜಬೆತ್ ಅವರ ಅಂತಿಮ ದರ್ಶನದಲ್ಲಿ ಪಾಲ್ಗೊಳ್ಳಲು ಚೀನಾ ಪ್ರತಿನಿಧಿಗಳಿಗೆ ಬ್ರಿಟನ್ ಸರ್ಕಾರ ಅವಕಾಶ ನಿರಾಕರಿಸಿದೆ.
ಈಗಾಗಲೇ ಐವರು ಚೀನೀ ಸಂಸದರಿಗೆ ಬ್ರಿಟನ್ ಸರ್ಕಾರ ನಿಷೇಧ ಹೇರಿದೆ. ಇದರ ಬೆನ್ನಲ್ಲೇ ವೆಸ್ಟ್ಮಿನ್ಸ್ಟರ್ ಹಾಲ್ನಲ್ಲಿ ಏರ್ಪಾಡು ಮಾಡಲಾಗಿರುವ ರಾಣಿ 2ನೇ ಎಲಿಜಬೆತ್ ಅವರ ಅಂತಿಮ ದರ್ಶನದಲ್ಲಿ ಪಾಲ್ಗೊಳ್ಳಲು ಚೀನಾದ ಯಾವುದೇ ಪ್ರತಿನಿಧಿಗಳಿಗೆ ಅವಕಾಶವಿಲ್ಲ ಎಂದು ತಿಳಿಸಿದೆ. ಆದರೆ ಸಂಸತ್ತಿನ ಸಮುತ್ಛಯದಿಂದ ಹೊರ ಭಾಗದಲ್ಲಿ ನಡೆಯುವ ರಾಣಿಯ ಅಂತ್ಯಕ್ರಿಯೆಯಲ್ಲಿ ಚೀನೀ ಪ್ರತಿನಿಧಿಗಳು ಪಾಲ್ಗೊಳ್ಳಬಹುದು ಎಂದು ಹೇಳಿದೆ.
ರಾಣಿಯವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಲಂಡನ್ನಲ್ಲಿ ಶುಕ್ರವಾರ ಸಾಕಷ್ಟು ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಪರಿಣಾ 8 ಕಿ.ಮೀ. ಉದ್ದದ ಸರತಿ ಸಾಲಿನಲ್ಲಿ 14 ಗಂಟೆಗಳ ಕಾಲ ಕಾದು ಜನರು ರಾಣಿಯ ಅಂತಿಮ ದರ್ಶನ ಪಡೆದರು ಎಂದು ತಿಳಿದು ಬಂದಿದೆ.