ಲಂಡನ್, ಸೆ 19 (DaijiworldNews/HR): ಬ್ರಿಟನ್ನ ದೀರ್ಘಾವಧಿಯ ರಾಣಿಯಾಗಿದ್ದ ಎರಡನೇ ಎಲಿಜಬೆತ್ ಅಂತ್ಯಕ್ರಿಯೆ ಇಂದು(ಸೋಮವಾರ) ವೆಸ್ಟ್ಮಿನಿಸ್ಟರ್ ಅಬ್ಬೆಯಲ್ಲಿ ಪೂರ್ಣ ಸರ್ಕಾರಿ ಗೌರವದೊಂದಿಗೆ ನಡೆಸಲಾಗುತ್ತದೆ.
ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ 3.30 ಕ್ಕೆ ಪ್ರಾರಂಭವಾಗಿ ಒಂದು ಗಂಟೆಯವರೆಗೆ ಇರುತ್ತದೆ. 1965ರಲ್ಲಿ ರಾಣಿ ಎಲಿಜಬೆತ್ ಅವರ ಮೊದಲ ಪ್ರಧಾನ ಮಂತ್ರಿ ವಿನ್ಸ್ಟನ್ ಚರ್ಚಿಲ್ ಅವರ ಮರಣದ ನಂತರ, ಬ್ರಿಟನ್ನಲ್ಲಿ ಮೊದಲ ಬಾರಿಗೆ ಒಂದು ಗಂಟೆ ಅವಧಿಯ ಅಂತ್ಯಕ್ರಿಯೆ ನಡೆಯಲಿದೆ.
ಇನ್ನು ಅಂತ್ಯಕ್ರಿಯೆಯಲ್ಲಿ ವಿಶ್ವ ನಾಯಕರು, ಬ್ರಿಟನ್ನ ರಾಜಮನೆತನ, ರಾಜಮನೆತನದ ರಾಜಕೀಯ ಗಣ್ಯರು ಮತ್ತು ಮಿಲಿಟರಿ, ನ್ಯಾಯಾಂಗ ಮತ್ತು ದತ್ತಿ ಸಂಸ್ಥೆಗಳ ಸದಸ್ಯರನ್ನು ರಾಜ್ಯ ಸೇರುತ್ತಾರೆ.
ಬ್ರಿಟನ್ನಾದ್ಯಂತ ಸುಮಾರು 125 ಚಿತ್ರಮಂದಿರಗಳಲ್ಲಿ ಅಂತ್ಯಕ್ರಿಯೆಯನ್ನು ತೊರಿಸಲಾಗುತ್ತ್ದೆ. ಜೊತೆಗೆ ಉದ್ಯಾನವನಗಳು, ಚೌಕಗಳು ಮತ್ತು ಕ್ಯಾಥೆಡ್ರಲ್ಗಳು ಕೂಡ ಅಂತ್ಯಕ್ರಿಯೆ ವೀಕ್ಷಿಸಲು ಪರದೆಗಳನ್ನು ಹಾಕಲಾಗಿದೆ.