ಇರಾನ್, ಸೆ 24 (DaijiworldNews/MS): ಇರಾನ್ನಲ್ಲಿ ಹಿಜಾಬ್ ಹೇರಿಕೆ ವಿರುದ್ಧ ನಡೆಯುತ್ತಿರುವ ಹೋರಾಟ ಶುಕ್ರವಾರ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ತೀವ್ರ ಸ್ವರೂಪ ಪಡೆದಿದ್ದು, ಸರ್ಕಾರದ ವಿರೋಧಿ ಪ್ರತಿಭಟನೆಗಳಲ್ಲಿ ಭದ್ರತಾ ಪಡೆಗಳಿಂದ ಕನಿಷ್ಠ 50 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದ್ದಾರೆ.
ಪೊಲೀಸರ ಕಸ್ಟಡಿಯಲ್ಲಿದ್ದ 22 ವರ್ಷದ ಯುವತಿ ಮಹ್ಸಾ ಅಮಿನಿ ಸಾವು ಖಂಡಿಸಿ, ಹೋರಾಟ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಭದ್ರತಾ ಪಡೆ ಗುಂಡಿನ ದಾಳಿ ನಡೆಸಿವೆ.
ಇಲ್ಲಿವರೆಗೆ ಕನಿಷ್ಠ 50 ಮಂದಿ ಮೃತಪಟ್ಟಿರುವುದಾಗಿ ಓಸ್ಲೋ ಮೂಲದ ಇರಾನ್ ಮಾನವ ಹಕ್ಕುಗಳ ಸಂಘಟನೆ ಹೇಳಿದೆ. ಸರಿಯಾಗಿ ಹಿಜಾಬ್ ಧರಿಸಿಲ್ಲ ಎಂದು ಪೊಲೀಸರು, ಮಹ್ಸಾರನ್ನು ಬಂಧಿಸಿದ್ದರು. ತೀವ್ರ ಹಲ್ಲೆ ನಡೆಸಿ, ಹತ್ಯೆ ಮಾಡಿದ್ದಾರೆ ಎಂದು ಪ್ರತಿಭಟನಾಕಾರರ ಆರೋಪವಾಗಿದೆ.
ಪ್ರತಿಭಟನಾಕಾರರ ಸಭೆ ಸೇರದಂತೆ ಅಡ್ಡಿಪಡಿಸಲು ಮತ್ತು ಪ್ರತಿಭಟನೆಯ ಸುದ್ದಿಗಳು ಹೊರ ಜಗತ್ತನ್ನು ತಲುಪದಂತೆ ತಡೆಯಲು ಇರಾನ್ ಇಂಟರ್ನೆಟ್ ಬಳಕೆಯ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಿದೆ.