ಅಮೆರಿಕ, ಸೆ 24 (DaijiworldNews/DB): ಎದೆನೋವು ಮತ್ತು ಉಸಿರಾಟದ ತೊಂದರೆಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ ವ್ಯಕ್ತಿಯ ಎಕ್ಸ್ರೇ ತೆಗೆಸಿದಾಗ ಆತನ ಶ್ವಾಸಕೋಶದಲ್ಲಿ ಮೂಗುತಿ ಪತ್ತೆಯಾದ ಘಟನೆ ಅಮೆರಿಕಾದಲ್ಲಿ ನಡೆದಿದೆ.
ಅಮೆರಿಕ ಮೂಲದ ಜಾಯ್ ಲಿಕಿನ್ಸ್ ಅವರು ಮಲಗಿದ್ದ ವೇಳೆ ಉಸಿರಾಟದ ತೊಂದರೆ ಮತ್ತು ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಮನೆಯವರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಎಕ್ಸ್ ರೇ ತೆಗೆದು ನೋಡಿದಾಗ 0.6 ಇಂಚಿನ ಮೂಗುತಿ ಶ್ವಾಸಕೋಶದಲ್ಲಿರುವುದು ಗೊತ್ತಾಗಿದೆ. ಬಳಿಕ ಶಸ್ತ್ರಚಿಕಿತ್ಸೆ ನಡೆಸಿ ಮೂಗುತಿಯನ್ನು ಹೊರ ತೆಗೆಯಲಾಯಿತು.
ಕಳೆದ ಐದ ವರ್ಷದ ಹಿಂದೆ ಜಾಯ್ ಅವರು ತಂದಿದ್ದ ಮೂಗುತಿ ಕಳೆದು ಹೋಗಿತ್ತು. ಆದರೆ ಕಳೆದುಹೋದ ಮೂಗುತಿ ಅವರ ಶ್ವಾಸಕೋಶ ಸೇರಿದೆ. ಐದು ವರ್ಷ ಶ್ವಾಸಕೋಶದೊಳಗೇ ಇದ್ದರೂ ಯಾವುದೇ ಸಮಸ್ಯೆ ಆಗಿರಲಿಲ್ಲ ಎಂದು ತಿಳಿದು ಬಂದಿದೆ.