ದುಬೈ, ಫೆ 11(MSP): ಅಬುಧಾಬಿ ಕೋರ್ಟ್ ಗಳಲ್ಲಿ ಹಿಂದಿ ಅಧಿಕೃತ ತೃತೀಯ ಭಾಷೆಯಾಗಿದೆ. ಅರೇಬಿಕ್ ಮತ್ತು ಇಂಗ್ಲೀಷ್ ಈಗಾಗಲೇ ಅಧಿಕೃತ ಭಾಷೆಗಳಾಗಿವೆ. ನ್ಯಾಯಾಲಯದ ಕಲಾಪದಲ್ಲಿ ಹಿಂದಿ ಬಳಕೆಗೆ ಅವಕಾಶ ಇದೆ ಎಂದು ಅಬುಧಾಬಿ ನ್ಯಾಯಾಂಗ ಇಲಾಖೆ ಶನಿವಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ.
ಹಿಂದಿ ಬಾಷಿಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. ಕಾರ್ಮಿಕರ ಕಾನೂನು, ವೀಸಾ ಸಂಬಂಧಿಸಿದ ಪ್ರಕರಣಗಳನ್ನು ಭಾರತೀಯರು ಹೆಚ್ಚಾಗಿ ಎದುರಿಸುತ್ತಿದ್ದಾರೆ.ಇದು ಹಿಂದಿ ಭಾಷಿಕರು ದೇಶದ ಕಾನೂನು, ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಇನ್ನಷ್ಟು ಹೆಚ್ಚು ತಿಳಿವಳಿಕೆ ಹೊಂದಲು ನೆರವಾಗಲಿದೆ. ಅಬುಧಾಬಿಯಲ್ಲಿ 90 ಲಕ್ಷ ಜನರಿದ್ದು, ಶೇ. 36ರಷ್ಟು ಜನರು ವಿದೇಶಿಗರಿದ್ದಾರೆ. ಒಟ್ಟು ಜನಸಂಖ್ಯೆಯ ಪೈಕಿ ಶೇ. 30ರಷ್ಟು ಮಂದಿ ಭಾರತೀಯರೇ ಆಗಿದ್ದಾರೆ ಎಂಬುದು ದತ್ತಾಂಶಗಳಿಂದ ತಿಳಿದುಬಂದಿದೆ
ನ್ಯಾಯಾಂಗ ಇಲಾಖೆಯ ವೆಬ್ ಸೈಟ್ ನಲ್ಲೂ ಹಿಂದಿ ಅರ್ಜಿ ನಮೂನೆಗಳು ಲಭ್ಯವಾಗಲಿದೆ ಎಂದು ನ್ಯಾಯಾಂಗ ಇಲಾಖೆಯ ಅಧೀನ ಕಾರ್ಯದರ್ಶಿ ಯೂಸಫ್ ಸಯೀದ್ ಅಲ್ ಅಬ್ರಿ ಹೇಳಿದ್ದಾರೆ.