ಸೊಮಾಲಿಯಾ, ಸೆ 25 (DaijiworldNews/DB): ಸೊಮಾಲಿಯಾದಲ್ಲಿ ಆತ್ಮಾಹುತಿ ದಾಳಿಗೆ ಓರ್ವ ಯೋಧ ಬಲಿಯಾಗಿದ್ದಾರೆ. ಅಲ್ಲದೆ ಘಟನೆಯಲ್ಲಿ ಆರು ಮಂದಿ ಬಲಿಯಾಗಿದ್ದಾರೆ.
ಸೊಮಾಲಿಯಾ ರಾಜಧಾನಿ ಮೊಗಾದಿಶುವಿನ ಪಶ್ಚಿಮದಲ್ಲಿರುವ ಸೇನಾ ನೆಲೆಯಲ್ಲಿ ಘಟನೆ ಸಂಭವಿಸಿದ್ದು, ಆತ್ಮಾಹುತಿ ಬಾಂಬರ್ ತನ್ನನ್ನು ಸ್ಪೋಟಿಸಿಕೊಂಡಿದ್ದಾನೆ. ಇದರಿಂದ ಇಲ್ಲಿ ಕರ್ತವ್ಯದಲ್ಲಿದ್ದ ಸೈನಿಕ ಸಾವನ್ನಪ್ಪಿದ್ದಾರೆ ಎಂದು ಸೈನಿಕ ಮತ್ತು ಆಸ್ಪತ್ರೆಯ ಕೆಲಸಗಾರ ಸುದ್ದಿಸಂಸ್ಥೆಯೊಂದಕ್ಕೆ ಮಾಹಿತಿ ನೀಡಿದ್ದಾನೆ.
ಆತ್ಮಾಹುತಿ ಬಾಂಬರ್ ಸಾಮಾನ್ಯ ಸೈನಿಕರ ವೇಷ ಧರಿಸಿ ಭಾನುವಾರ ಮುಂಜಾನೆ ಸೈನಿಕರ ತಂಡದಲ್ಲಿ ಸೇರಿಕೊಂಡಿದ್ದ. ಆದರೆ ಆತ ಆತ್ಮಾಹುತಿ ಬಾಂಬರ್ ಎಂಬ ಸಣ್ಣ ಸುಳಿವೂ ಸಿಕ್ಕಿರಲಿಲ್ಲ. ಚೆಕ್ಪಾಯಿಂಟ್ನಲ್ಲಿ ಆತ ತನ್ನನ್ನು ತಾನು ಸ್ಪೋಟಿಸಿಕೊಂಡಿದ್ದ. ಘಟನೆಯಲ್ಲಿ ಓರ್ವ ಸೈನಿಕನ್ನು ನಾವು ಕಳೆದುಕೊಂಡೆವು. ಎಂದು ಬೇಸ್ನಲ್ಲಿರುವ ಸೈನಿಕ ಕ್ಯಾಪ್ಟನ್ ಅಡೆನ್ ಒಮರ್ ತಿಳಿಸಿದ್ದಾರೆಂದು ವರದಿಯಾಗಿದೆ.
ದಾಳಿಯ ಹೊಣೆಯನ್ನು ಈವರೆಗೆ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಅಲ್ಲದೆ ದಾಳಿ ನಡೆಸಿದ ವ್ಯಕ್ತಿ ಯಾರೆಂಬ ಬಗ್ಗೆಯೂ ಮಾಹಿತಿ ಗೊತ್ತಾಗಿಲ್ಲ. ಇಸ್ಲಾಮಿಸ್ಟ್ ಗುಂಪು ಅಲ್ ಶಬಾಬ್ ಆಗಾಗ್ಗೆ ಸೊಮಾಲಿಯ ಮತ್ತಿತರ ಕಡೆಗಳಲ್ಲಿ ಬಾಂಬ್, ಬಂದೂಕು ದಾಳಿಗಳನ್ನು ನಡೆಸುತ್ತದೆ. ಅಲ್ಲದೆ, ಸೊಮಾಲಿಯಾ ಸರ್ಕಾರವನ್ನು ಉರುಳಿಸಿಇಸ್ಲಾಮಿಕ್ ಷರಿಯಾ ಕಾನೂನು ಮೂಲಕ ಅಧಿಕಾರ ಸ್ಥಾಪಿಸಲು ಅಲ್ ಖೈದಾ-ಮಿತ್ರ ಗುಂಪು ಇಲ್ಲಿ ಹುನ್ನಾರ ನಡೆಸುತ್ತಿದೆ ಎಂದೂ ವರದಿಗಳು ತಿಳಿಸಿವೆ.