ಇರಾನ್, ಸೆ 29 (DaijiworldNews/MS): ಇರಾನ್ನಲ್ಲಿ ಹಿಜಾಬ್ ವಿರುದ್ಧ ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ ತನ್ನ ತಲೆಗೆ ಧರಿಸಿದ್ದ ಸ್ಕಾರ್ಫ್ ಕಿತ್ತೆಸೆದು ಬೆಂಬಲ ವ್ಯಕ್ತಪಡಿಸಿದ್ದ ಹದೀಸ್ ನದಾಫಿ ಎಂಬ ಯುವತಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ವೈರಲ್ ಆಗಿರುವ ಪ್ರತಿಭಟನೆಯ ವೀಡಿಯೊದಲ್ಲಿ ಇರಾನಿನ ಯುವತಿ ಹದಿಸ್ ನಜಾಫಿ ಕಂಡು ಕರಾಜ್ ನಗರದಲ್ಲಿ ಪ್ರತಿಭಟನೆಯ ಸಮಯದಲ್ಲಿ ಇರಾನ್ ಭದ್ರತಾ ಪಡೆಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ, ಹಿಜಾಬ್ ಸರಿಯಾಗಿ ಧರಿಸದೇ ಇರುವ ಕಾರಣಕ್ಕೆ ಮೆಹ್ಸಾ ಅಮಿನಿ ಎಂಬ ಯುವತಿಯನ್ನು ಇರಾನ್ ಪೊಲೀಸರು ಬಂಧಿಸಿದ್ದರು. ಪೊಲೀಸರ ವಶದಲ್ಲಿ ಆಕೆ ಮೃತಪಟ್ಟಿದ್ದಳು. ಪೊಲೀಸರ ನೈತಿಕಗಿರಿ ಖಂಡಿಸಿ ಇರಾನ್, ಸಿರಿಯಾ, ಇಂಗ್ಲೆಂಡ್ ಸೇರಿದಂತೆ ಹಲವು ದೇಶಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಇದೇ ರೀತಿ ಟೆಹರಾನ್ನಲ್ಲಿ ನಡೆದ ಪ್ರತಿಭಟನೆ ವೇಳೆ ಸ್ಕಾರ್ಫ್ ಕಿತ್ತೆಸೆದು ಹೊಂಬಣ್ಣದ ಕೂದಲು ಕಟ್ಟುತ್ತಿರುವ 20 ವರ್ಷದ ಹರೆಯಾದ ಹದೀಸ್ ನದಾಫಿ ಪೋಟೋ ಎಲ್ಲೆಡೆ ವೈರಲ್ ಆಗಿತ್ತು.
ಆಕೆಯ ಹೊಟ್ಟೆ, ಕುತ್ತಿಗೆ, ಹೃದಯ ಮತ್ತು ಕೈಗೆ ಗುಂಡು ಹಾರಿಸಲಾಗಿದೆ ಎಂದು ವರದಿಯಾಗಿವೆ. ಆಕೆಯ ಅಂತ್ಯಕ್ರಿಯೆಯ ಸಂದರ್ಭ ವೀಡಿಯೋ ವೈರಲ್ ಆಗಿದ್ದು ಸಮಾಧಿಯ ಮೇಲೆ ಆಕೆಯ ಫೋಟೋವನ್ನು ನೋಡಿ ಜನರು ಅಳುತ್ತಿರುವುದನ್ನು ತೋರಿಸುತ್ತಿದೆ. ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ಕಾರ್ಯಕರ್ತ ಮಸಿಹ್ ಅಲಿನೆಜಾದ್ ಅವರು ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ.