ಕೆನಡಾ, ಸೆ 29 (DaijiworldNews/DB): ಭದ್ರತೆ, ಉಗ್ರರ ಸಮಸ್ಯೆ ಹಿನ್ನೆಲೆಯಲ್ಲಿ ಭಾರತದ ಕೆಲವು ರಾಜ್ಯಗಳಿಗೆ ಪ್ರವಾಸ ಕೈಗೊಳ್ಳದಿರಿ ಎಂಬುದಾಗಿ ಕೆನಡಾ ಸರ್ಕಾರ ತನ್ನ ಪ್ರಜೆಗಳಿಗೆ ಸೂಚನೆ ನೀಡಿದೆ.
ಭಾರತದ ಕೆಲವು ರಾಜ್ಯಗಳ ಪಟ್ಟಿಯನ್ನು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಿರುವ ಕೆನಡಾ ಸರ್ಕಾರ, ಈ ರಾಜ್ಯಗಳಿಗೆ ಪ್ರವಾಸ ಕೈಗೊಳ್ಳದಂತೆ ಎಚ್ಚರಿಕಡ ನೀಡಿದೆ. ಮುಖ್ಯವಾಗಿ ಪಾಕಿಸ್ತಾನದ ಗಡಿ ಸೇರಿದಂತೆ ರಾಜಸ್ಥಾನ್, ಗುಜರಾತ್, ಪಂಜಾಬ್, ಈಶಾನ್ಯ ರಾಜ್ಯಗಳಾದ ಅಸ್ಸಾಂ ಮತ್ತು ಮಿಜೊರಾಂ ಮುಂತಾದ ಕಡೆಗಳಿಗೆ ಪ್ರವಾಸ ಕೈಗೊಳ್ಳುವುದು ಅಪಾಯಕಾರಿ ಎಂದಿದೆ.
ಭದ್ರತೆ ಸಮಸ್ಯೆ, ಉಗ್ರರ ಸಮಸ್ಯೆಯ ಅಪಾಯ ಈ ರಾಜ್ಯಗಳಲ್ಲಿದೆ. ಅಲ್ಲದೆ ಯಾವುದೇ ಮೂಲೆಯಲ್ಲಾದರೂ ಉಗ್ರರು ದಾಳಿ ನಡೆಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಸರ್ಕಾರ ತಿಳಿಸಿರುವುದಾಗಿ ವರದಿಯಾಗಿದೆ.