ನ್ಯೂಯಾರ್ಕ್ (ಯುಎಸ್), ಅ 02 (DaijiworldNews/DB): ಮಹಾತ್ಮಾ ಗಾಂಧೀಜಿಯವರ ಅಹಿಂಸಾ ತತ್ವವನ್ನು ಪಾಲಿಸುವುದರೊಂದಿಗೆ ಹಿಂಸೆಯನ್ನು ದೂರವಿಡುವಂತೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಭಾನುವಾರ ಜನರಿಗೆ ಮನವಿ ಮಡಿದ್ದಾರೆ.
ಗಾಂಧಿ ಜಯಂತಿ ಹಾಗೂ 'ಅಂತರರಾಷ್ಟ್ರೀಯ ಅಹಿಂಸಾ ದಿನವಾದ ಇಂದು ಟ್ವೀಟ್ ಮೂಲಕ ಈ ಮನವಿ ಮಾಡಿರುವ ಅವರು, 'ಅಂತರರಾಷ್ಟ್ರೀಯ ಅಹಿಂಸಾ ದಿನವೆಂದು ಗಾಂಧಿ ಜಯಂತಿಯನ್ನು ನಾವು ಆಚರಣೆ ಮಾಡುತ್ತೇವೆ. ಶಾಂತಿ, ಘನತೆ, ಗೌರವಗಳ ಮೌಲ್ಯವನ್ನು ಎತ್ತಿ ಹಿಡಿಯಬೇಕಾದುದು ನಮ್ಮ ಕರ್ತವ್ಯ. ಹಿಂಸೆಯಿಂದ ದೂರವಿದ್ದು, ಅಹಿಂಸೆಯಿಂದ ನಡೆದುಕೊಂಡರೆ ಮತ್ತು ಸತ್ಯ ಮಾರ್ಗದಲ್ಲಿ ಸಾಗಿದರೆ ಆ ಮೌಲ್ಯಗಳಿಗೆ ಅರ್ಥ ಸಿಗುತ್ತದೆ ಎಂದವರು ಪ್ರತಿಪಾದಿಸಿದ್ದಾರೆ.
ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಭವಿಷ್ಯ ಕಂಡುಕೊಳ್ಳಲು ಸಾಧ್ಯವಿದೆ. ಸವಾಲುಗಳನ್ನು ಸೋಲಿಸಿ ಸಂಘಟಿತರಾಗಿ ಬಾಳೋಣ ಎಂದವರು ಇದೇ ವೇಳೆ ಕರೆ ನೀಡಿದ್ದಾರೆ.