ಬ್ಯಾಂಕಾಕ್, ಅ 06 (DaijiworldNews/DB): ಮಾಜಿ ಪೊಲೀಸ್ ಪೇದೆಯೊಬ್ಬ ಮಕ್ಕಳ ಡೇ ಕೇರ್ ಸೆಂಟರ್ನಲ್ಲಿ ಗುಂಡಿನ ದಾಳಿ ನಡೆಸಿ 22 ಮಕ್ಕಳು ಸೇರಿ ಒಟ್ಟು 34 ಮಂದಿಯನ್ನು ಹತ್ಯೆಗೈದ ಘಟನೆ ಥಾಯ್ಲೆಂಡ್ನಲ್ಲಿ ನಡೆದಿದೆ.
ಆರೋಪಿಯು ಡೇ ಕೇರ್ ಸೆಂಟರ್ನಲ್ಲಿ ಗುಂಡಿನ ದಾಳಿ ನಡೆಸಿ 22 ಮಕ್ಕಳು ಮತ್ತು 12 ಮಂದಿ ವಯಸ್ಕರನ್ನು ಕೊಂದಿದ್ದಾನೆ. ಬಳಿಕ ತನ್ನ ಮಗು ಹಾಗೂ ಪತ್ನಿಗೆ ಗುಂಡಿಕ್ಕಿ ತಾನೂ ಗುಂಡು ಹಾರಿಸಿಕೊಂಡಿದ್ದಾನೆ. ಆದರೆ ಆತ ಮತ್ತು ಕುಟುಂಬದ ಪರಿಸ್ಥಿತಿ ಹೇಗಿದೆ ಎಂಬುದು ತಿಳಿದು ಬಂದಿಲ್ಲ.
ಶೂಟರ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಆತನ ಬಗ್ಗೆ ಸುಳಿವು ದೊರೆತಲ್ಲಿ ಕೂಡಲೇ ಬಂಧಿಸುವಂತೆ ಎಲ್ಲಾ ಏಜೆನ್ಸಿಗಳಿಗೆ ಥಾಯ್ಲೆಂಡ್ ಪ್ರಧಾನಿ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.
2020 ರಲ್ಲಿಯೂ ಥಾಯ್ಲೆಂಡ್ನಲ್ಲಿ ಇದೇ ರೀತಿ ಗುಂಡಿನ ದಾಳಿ ನಡೆಸಿ ಸಾಮೂಹಿಕ ಹತ್ಯೆ ಮಾಡಿದ ಘಟನೆ ನಡೆದಿತ್ತು. ಆಸ್ತಿ ವ್ಯವಹಾರದ ಗಲಾಟೆಯಲ್ಲಿ ಕೋಪಗೊಂಡಿದ್ದ ಸೈನಿಕನೊಬ್ಬ 29 ಮಂದಿಯನ್ನು ಗುಂಡಿಕ್ಕಿ ಹತ್ಯೆಗೈದಿದ್ದ. ಈ ಘಟನೆಯಲ್ಲಿ 57 ಮಂದಿ ಗಾಯಗೊಂಡಿದ್ದರು.