ಉಕ್ರೇನ್, ಅ 09 (DaijiworldNews/DB): ಝಪೊರಿಝಿಯಾ ನಗರದ ಮೇಲೆ ರಷ್ಯಾ ಕಳೆದ ರಾತ್ರಿ ನಡೆಸಿದ ವೈಮಾನಿಕ ದಾಳಿಗೆ 17 ಮಂದಿ ಬಲಿಯಾಗಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
ಶನಿವಾರ ರಾತ್ರಿಯಿಡೀ ರಷ್ಯಾ ವೈಮಾನಿಕ ದಾಳಿ ನಡೆಸಿದೆ. ಕನಿಷ್ಠ ಐದು ಮನೆಗಳು ಸರ್ವನಾಶವಾಗಿದ್ದು, 40 ಕಟ್ಟಡಗಳು ಹಾನಿಗೀಡಾಗಿವೆ ಎಂದು ನಗರ ಸಭೆಯ ಕಾರ್ಯದರ್ಶಿ ಅನಾಟೊಲಿ ಕುರ್ಟೆವ್ ತಿಳಿಸಿರುವುದುಆಗಿ ವರದಿಯಾಗಿದೆ. ದಾಳಿ ಬಗ್ಗೆ ಉಕ್ರೇನ್ ಸೇನೆ ಕೂಡಾ ಖಚಿತಪಡಿಸಿದೆ.
ಕ್ರೈಮಿಯಾದ ಕೆರ್ಚ್ ಸೇತುವೆಯ ಮೇಲೆ ರಷ್ಯಾದ ಇಂಧನ ಟ್ಯಾಂಕ್ ಸುಟ್ಟ ನಂತರ ಅಲ್ಲಿ ಮುಷ್ಕರ ನಡೆದಿದ್ದು, ಉಕ್ರೇನ್ ಮಾಧ್ಯಮಗಳು ಈ ಘಟನೆಯನ್ನು ಟ್ಯಾಂಕ್ ಸ್ಪೋಟ ಎಂದು ಬಿಂಬಿಸಿದ್ದವು. ಇದರ ಬೆನ್ನಲ್ಲೇ ರಷ್ಯಾದಿಂದ ವೈಮಾನಿಕ ದಾಳಿ ನಡೆದಿರುವುದಾಗಿ ತಿಳಿದು ಬಂದಿದೆ.