ಪಾಕಿಸ್ತಾನ, ಅ 11 (DaijiworldNews/HR): ಹಿಂದೂ ಹುಡುಗಿಯೊಬ್ಬಳನ್ನು ಅಪಹರಿಸಿರುವ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಹೈದರಾಬಾದ್ ಪಟ್ಟಣದಲ್ಲಿ ನಡೆದಿದ್ದು, ಇದು 15 ದಿನಗಳಲ್ಲಿ ನಾಲ್ಕನೇ ಘಟನೆಯಾಗಿದೆ.
ಚಂದ್ರ ಮೆಹರಾಜ್ ಹೈದರಾಬಾದ್ನ ಫತೇ ಚೌಕ್ ಪ್ರದೇಶದಿಂದ ಮನೆಗೆ ಮರಳುತ್ತಿದ್ದಾಗ ಅಪಹರಿಸಲಾಗಿದ್ದು, ಪೊಲೀಸ್ ದೂರು ದಾಖಲಿಸಿದ್ದು ಬಾಲಕಿ ಇನ್ನೂ ಪತ್ತೆಯಾಗಿಲ್ಲ ಎಂದು ಆಕೆಯ ಪೋಷಕರು ತಿಳಿಸಿದ್ದಾರೆ.
ಇನ್ನು ಇದೇ ರೀತಿಯಾಗಿ ಕಳೆದ 15 ದಿನಗಳಲ್ಲಿ ನಾಲ್ಕು ಮಂದಿಯನ್ನು ಅಪಹರಿಸಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮೂವರು ಮಹಿಳೆಯರನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಿದ ಕೆಲವೇ ದಿನಗಳಲ್ಲಿ ಪಾಕ್ನಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆದ ದೌರ್ಜನ್ಯಗಳು ಬೆಳಕಿಗೆ ಬಂದಿದೆ.