ಲಾರೆಲ್, ಅ 12 (DaijiworldNews/MS):ಅಮೆರಿಕ ಬಾಹ್ಯಾಕಾಶ ಸಂಸ್ಥೆ 'ನಾಸಾ' ಕಳೆದ ತಿಂಗಳು ಉದ್ದೇಶಪೂರ್ವಕವಾಗಿ ಬಾಹ್ಯಾಕಾಶ ನೌಕೆಯನ್ನು ಡಿಕ್ಕಿ ಹೊಡೆಸಿ, ಕ್ಷುದ್ರಗ್ರಹದ ಮಾರ್ಗ ಬದಲಾಯಿಸುವಲ್ಲಿ ಯಶಸ್ವಿಯಾಗಿದೆ.
ನಾಸದ ಬಾಹ್ಯಾಕಾಶ ನೌಕೆ ‘ಡಾರ್ಟ್ ( ಡಬಲ್ ಅಸ್ಟ್ರಾಯ್ಡ್ ರೀಡೈರೆಕ್ಷನ್ ಟೆಸ್ಟ್ – ಕ್ಷುದ್ರಗ್ರಹದ ಪಥ ಬದಲಿಸುವ ಪರೀಕ್ಷೆ)ಕ್ಷುದ್ರಗ್ರಹ ‘ಡಿಮೊರ್ಫಾಸ್’ಗೆ ಹೈಪರ್ ಸಾನಿಕ್ ವೇಗದಲ್ಲಿ ಡಿಕ್ಕಿ ಹೊಡೆದಿತ್ತು
ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿರುವ ನಾಸಾ, 'ಮಾನವ ಪ್ರಯತ್ನವು ಮೊದಲ ಬಾರಿಗೆ ಆಕಾಶಕಾಯದ ಚಲನೆಯನ್ನು ಬದಲಾಯಿಸಿತು' ಎಂದು ಹೇಳಿದೆ. DART ಮಿಷನ್ ಭಾಗವಾಗಿ ಭೂಮಿಗೆ ಸಂಭಾವ್ಯ ಉಲ್ಕಾಶಿಲೆ ಘರ್ಷಣೆ ತಡೆಯಲು ಬಾಹ್ಯಾಕಾಶ ನೌಕೆಯನ್ನು ತಯಾರಿಸಲಾಗಿದೆ.