ಸೌದಿ ಅರೇಬಿಯಾ,ಅ 14 (DaijiworldNews/MS): "ಮಹ್ರಮ್" ಅಥವಾ ಪುರುಷ ಒಡನಾಡಿ ಇಲ್ಲದೆ ಮಹಿಳೆಯರಿಗೆ ಹಜ್ ಮತ್ತು ಉಮ್ರಾ ಯಾತ್ರೆಗೆ ಹಾಜರಾಗಲು ಅವಕಾಶ ನೀಡುವ ಐತಿಹಾಸಿಕ ನಿರ್ಧಾರವನ್ನು ಸೌದಿ ಅರೇಬಿಯಾ ಮಾಡಿದೆ.
ಸೌದಿ ಅರೇಬಿಯಾದ ಮಹಾರಾಜ ಮೊಹಮ್ಮದ್ ಬಿನ್ ಸಲ್ಮಾನ್ ಪ್ರಧಾನಿಯಾದ ನಂತರ ಸೌದಿ ಅವರ ಸರ್ಕಾರವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಕೈರೋದಲ್ಲಿರುವ ಸೌದಿ ರಾಯಭಾರ ಕಚೇರಿಯಲ್ಲಿ ಮಾತನಾಡಿದ ಹಜ್ ಮತ್ತು ಉಮ್ರಾ ಸಚಿವ ತೌಫಿಕ್ ಅಲ್ ರಬಿಯಾ, ಮಹಿಳೆಯು ಮಹರಮ್ ಇಲ್ಲದೆ (ಪುರುಷ ಪೋಷಕ) ಇಲ್ಲದೆ ಉಮ್ರಾ ಯಾತ್ರೆಗೆ ರಾಜ್ಯಕ್ಕೆ ಬರಬಹುದು ಎಂದು ಹೇಳಿದ್ದಾರೆ.
ಯಾತ್ರೆಗೆ ಬರುವ ಎಲ್ಲಾ ಮಹಿಳೆಯರಿಗೆ ಪೂರ್ಣ ಪ್ರಮಾಣದಲ್ಲಿಸುರಕ್ಷತೆ ಒದಗಿಸುವ ಉದ್ದೇಶದಿಂದ ಎಲ್ಲಾ ಮಾದರಿಯ ಸಾರಿಗೆ ವ್ಯವಸ್ಥೆ , ಬಂದರುಗಳು ಸೇರಿದಂತೆ ಸೌದಿ ಅರೇಬಿಯಾದ್ಯಂತ ಭದ್ರತೆ ಹೆಚ್ಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸೌದಿ ಗೆಜೆಟ್ ಪ್ರಕಾರ, ಅಲ್-ರಬಿಯಾ ಅವರು ಯಾವುದೇ ರೀತಿಯ ವೀಸಾದೊಂದಿಗೆ ಉಮ್ರಾಕ್ಕಾಗಿ ಸೌದಿ ಅರೇಬಿಯಾಕ್ಕೆ ಬರಬಹುದು ಎಂದು ಹೇಳಿದರು. ಉಮ್ರಾ ವೀಸಾಕ್ಕೆ ಯಾವುದೇ ಕೋಟಾ ಅಥವಾ ಸಂಖ್ಯೆಯ ಮಿತಿ ಇಲ್ಲ ಎಂದು ತಿಳಿಸಲಾಗಿದೆ.
ಈ ಮೂಲಕ ಮಹಿಳೆಯರಿಗೆ ಹಜ್ ಯಾತ್ರೆ ಕೈಗೊಳ್ಳಲು ಮೆಹ್ರಾಮ್ ನ ಅಗತ್ಯವಿದೆಯೇ ಎಂಬ ಚರ್ಚೆಗೆ ಸೌದಿ ಸರ್ಕಾರ ತೆರೆ ಎಳೆದಿದೆ.