ನವದೆಹಲಿ, ಫೆ 15(MSP): ಆತ್ಮಾಹುತಿ ದಾಳಿಗೆ ಕಾರಣವಾಗಿರುವ ಜೈಷ್ - ಎ-ಮೊಹಮದ್ ಸಂಘಟನೆ ಸ್ಥಾಪಕನ ಪರವಾಗಿ ಪಾಕಿಸ್ತಾನ ಹಾಗೂ ಚೀನಾ ಬ್ಯಾಟ್ ಮಾಡುತ್ತಿದೆ. ಹೀಗಾಗಿ ಉಗ್ರ ದಾಳಿ ಕುರಿತು ಇವೆರಡು ದೇಶಗಳ ಸರ್ಕಾರದಿಂದ ಅಧಿಕೃತ ಹೇಳಿಕೆಯೇ ಬಂದಿಲ್ಲ. ಶಾಂತಿ ಮಾತುಕತೆ ಮಾತನ್ನಾಡುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಪಾಕ್ತಿಸ್ತಾನದಲ್ಲಿ ಉತ್ತಮ ಮಳೆಯಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ಆದರೆ ಅವರ ನೆಲದಲ್ಲಿ ಉಗ್ರ ಸಂಘಟನೆ ಮಾಡಿರುವ ಕುಕೃತ್ಯದ ಬಗ್ಗೆ ಮಾತ್ರ ಮೌನವಾಗಿದ್ದಾರೆ.
ಇನ್ನೊಂದೆಡೆ ಪಾಕ್ ಪ್ರೇರಿತ ಉಗ್ರ ಚಟುವಟಿಕೆಗೆ ಜಾಗತಿಕವಾಗಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಅಮೆರಿಕಾ, ರಷ್ಯಾ, ಫ್ರಾನ್ಸ್, ಬ್ರಿಟನ್, ನೇಪಾಳ ಸೇರಿ ಬಹುತೇಕ ರಾಷ್ಟ್ರಗಳ ಭಾರತದ ಪರವಾಗಿ ನಿಂತಿದೆ. ಉಗ್ರ ದಾಳಿ ಹೇಯ ಕೃತ್ಯವಾಗಿದ್ದು, ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಭಾರತದ ಪರವಾಗಿ ನಿಲ್ಲುವೆವು ಎಂದು ರಾಷ್ಟ್ರಗಳು ಹೇಳಿವೆ.