ಫ್ಲೋರಿಡಾ, ಅ 15 (DaijiworldNews/MS): ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಸ್ಪೇಸ್ಎಕ್ಸ್ನ ಕ್ರ್ಯೂ 4 ಕ್ಯಾಪ್ಸುಲ್ನ ಗಗನಯಾತ್ರಿಗಳು, ಅಂತರಿಕ್ಷದ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಸುಮಾರು 170 ದಿನಗಳ ನಂತರ ಶುಕ್ರವಾರ ಭೂಮಿಗೆ ಯಶಸ್ವಿಯಾಗಿ ಮರಳಿದ್ದಾರೆ.
ಈ ಬಗ್ಗೆ instagramನಲ್ಲಿ ಪೋಸ್ಟ್ ಮಾಡಿರುವ ನಾಸಾ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ನಾಲ್ಕನೇ ಕಮರ್ಷಿಯಲ್ ಸಿಬ್ಬಂದಿ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಬರೆದುಕೊಂಡಿದೆ.
ಮೂರು ನಾಸಾ ಗಗನಯಾತ್ರಿಗಳು ಮತ್ತು ಒಬ್ಬ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್ಎಕ್ಸ್ ಕ್ಯಾಪ್ಸುಲ್ ಶುಕ್ರವಾರ ಫ್ಲೋರಿಡಾದ ಕರಾವಳಿಯ ಅಟ್ಲಾಂಟಿಕ್ ಸಾಗರದಲ್ಲಿಇಳಿಯಿತು.
ಅಂತರಿಕ್ಷದಲ್ಲಿ 170 ದಿನಗಳನ್ನು ಕಳೆದ ನಂತರ ಗಗನಯಾತ್ರಿಗಳು ಹಿಂತಿರುಗಿದ್ದಾರೆ ಎಂದು ನಾಸಾ ತಿಳಿಸಿದೆ. ಈ ಮಿಷನ್ ಅನ್ನು ಏಪ್ರಿಲ್ 27 ರಂದು ಪ್ರಾರಂಭಿಸಲಾಗಿತ್ತು.