ನ್ಯೂಯಾರ್ಕ್, ಅ 19 (DaijiworldNews/HR): ಭಾರತದಿಂದ ಕಳ್ಳಸಾಗಾಣಿಕೆ ಮಾಡಲಾಗಿದ್ದ ನಾಲ್ಕು ದಶಲಕ್ಷ ಡಾಲರ್ ಮೌಲ್ಯದ ಪ್ರಾಚೀನ ವಸ್ತುಗಳನ್ನು ಮರಳಿ ಭಾರತಕ್ಕೆ ಹಸ್ತಾಂತರಿಸಲಾಗಿದೆ.
ಅಮೆರಿಕದ ಮಾನಂಟನ್ ಜಿಲ್ಲೆಯ ಅಟಾರ್ನಿ ಜನರಲ್ ಕಚೇರಿಯು ಈ ಮಾಹಿತಿಯನ್ನು ನೀಡಿದ್ದು, ಭಾರತದಿಂದ ಕಳ್ಳಸಾಗಾಣಿಕೆ ಮಾಡಲಾಗಿದ್ದ ನಾಲ್ಕು ದಶಲಕ್ಷ ಡಾಲರ್ ಮೌಲ್ಯದ ಪ್ರಾಚೀನ ವಸ್ತುಗಳನ್ನು ಮರಳಿ ಭಾರತಕ್ಕೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದೆ.
ಇನ್ನು ಸುಮಾರು 15 ವರ್ಷಗಳ ತನಿಖೆಯಿಂದಾಗಿ ಭಾರತ, ಆಫ್ಘಾನಿಸ್ತಾನ, ಕಾಂಬೋಡಿಯ, ಇಂಡೋನೇಷ್ಯ, ಮ್ಯಾನ್ಮಾರ್, ನೇಪಾಳ, ಪಾಕಿಸ್ತಾನ, ಶ್ರೀಲಂಕಾ, ಥೈಲಾಂಡ್ ಸೇರಿದಂತೆ ಇತರ ದೇಶಗಳಿಂದ ಕಳ್ಳ ಸಾಗಾಣಿಕೆಯಾಗಿದ್ದ 235ಕ್ಕೂ ಹೆಚ್ಚು ವಸ್ತುಗಳನ್ನು ತನಿಖಾಕಾಧಿರಿಗಳು ಸುಭಾಷ್ ಕಪೂರ್ ಎಂಬ ಕಲಾ ವಸ್ತುಗಳ ಡೀಲರ್ನಿಂದ ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ.