ಇಸ್ಲಾಮಾಬಾದ್, ಅ 21 (DaijiworldNews/HR): ವಿದೇಶಿ ಗಣ್ಯರಿಂದ ಪಡೆದ ಸರ್ಕಾರಿ ಉಡುಗೊರೆಗಳನ್ನು ಕಾನೂನುಬಾಹಿರವಾಗಿ ಮಾರಾಟ ಮಾಡಿದ ಆರೋಪದ ಮೇಲೆ ಪಾಕಿಸ್ತಾನದ ಚುನಾವಣಾ ಆಯೋಗವು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನ ಸಾರ್ವಜನಿಕ ಹುದ್ದೆಯಿಂದ ಅನರ್ಹಗೊಳಿಸಿದ್ದು, ಯಾವುದೇ ಚುನಾವಣೆಗೆ ಸ್ಪರ್ಧಿಸದಂತೆ ಅಜೀವ ನಿಷೇಧ ಹೇರಿದೆ.
ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಚುನಾವಣಾ ಆಯೋಗವು ಇಮ್ರಾನ್ ಖಾನ್ ಅವರನ್ನು ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧ ಹೇರಿದೆ.
ಇನ್ನು ತೋಶಾ ಖಾನಾ ಪ್ರಕರಣದಲ್ಲಿ ಇಮ್ರಾನ್ ಖಾನ್ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಇಸಿಪಿ ತೀರ್ಪು ನೀಡಿದ್ದು ಈ ಮೂಲಕ ಇಮ್ರಾನ್ ಖಾನ್ ಇನ್ನು ಮುಂದೆ ಸಂಸತ್ತಿನ ಸದಸ್ಯರಲ್ಲ ಎಂದು ಇಸಿಪಿ ಘೋಷಿಸಿದೆ.