ಇರಾನ್ , ಅ 25 (DaijiworldNews/MS): ಹಲವಾರು ದಶಕಗಳವರೆಗೆ ಸ್ನಾನ ಮಾಡದೆ "ವಿಶ್ವದ ಅತ್ಯಂತ ಕೊಳಕು ಮನುಷ್ಯ" ಎಂದು ಅಡ್ಡಹೆಸರು ಹೊಂದಿರುವ ಇರಾನಿನ ವ್ಯಕ್ತಿ 94 ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಾರೆ.
೫೦ ವರ್ಷಕ್ಕೂ ಹೆಚ್ಚು ಕಾಲ ಸ್ನಾನ ಮಾಡದೆ , ಒಂಟಿಯಾಗಿ ಜೀವನ ಸಾಗಿಸುತ್ತಿದ್ದ ಅಮೌ ಹಾಜಿ ಅವರು ದಕ್ಷಿಣ ಪ್ರಾಂತ್ಯದ ಫಾರ್ಸ್ನ ಡೆಜ್ಗಾಹ್ ಗ್ರಾಮದಲ್ಲಿ ಭಾನುವಾರ ನಿಧನರಾಗಿದ್ದಾರೆ.
ಆದರೆ "ಕೆಲವು ತಿಂಗಳ ಹಿಂದೆ ಮೊದಲ ಬಾರಿಗೆ, ಗ್ರಾಮಸ್ಥರು ಅವನನ್ನು ಸ್ವಚ್ಚಗೊಳಿಸಲೆಂದು ಸ್ನಾನಗೃಹಕ್ಕೆ ಕರೆದೊಯ್ದಿದ್ದರು ಎಂದು " ವರದಿ ಸ್ಥಳೀಯ ಮಾಧ್ಯಮವೊಂದು ಮಾಡಿದೆ.
ಸ್ನಾನ ಮಾಡಿದರೆ ಕಾಯಿಲೆ ಬಾಧಿಸುತ್ತದೆ ಎಂದು ಆತ ನಂಬಿದ್ದ ಎಂದು ವರದಿ ಮಾಡಿದೆ. ಅವನ ಕುರಿತಂತೆ 2013ರಲ್ಲಿ "ದಿ ಸ್ಟ್ರೇಂಜ್ ಲೈಫ್ ಆಫ್ ಅಮೌ ಹಾಜಿ"' ಎನ್ನುವ ಕಿರುಚಿತ್ರ ಕೂಡ ಬಿಡುಗಡೆಯಾಗಿತ್ತು.