ಟೆಹರಾನ್, ಅ 27 (DaijiworldNews/MS): ದಕ್ಷಿಣ ಇರಾನ್ನ ಪ್ರಮುಖ ಶಿಯಾ ಮುಸ್ಲಿಂ ಮಸೀದಿ ಮೇಲೆ ಬುಧವಾರ ಉಗ್ರರು ಭೀಕರು ದಾಳಿ ನಡೆಸಿದ ಪರಿಣಾಮ ಕನಿಷ್ಠ 15 ಜನರು ಸಾವನ್ನಪ್ಪಿ, ೪೦ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ನಡೆದಿದೆ.
ಶಿರಾಜ್ ನಗರದ ಶಾ ಚೆರಾಗ್ ನಲ್ಲಿ ಸಂಜೆಯ ಪ್ರಾರ್ಥನೆಯ ಸಮಯದಲ್ಲಿ ನುಗ್ಗಿದ ಶಸ್ತ್ರಸಜ್ಜಿತ ಭಯೋತ್ಪಾದಕರು ಮನಬಂದಂತೆ ಗುಂಡು ಹಾರಿಸಿದ್ದಾರೆ.
ಇರಾನಿನ ಮಾಧ್ಯಮಗಳು ಮಸೀದಿಯೊಳಗೆ ರಕ್ತಸಿಕ್ತ ದೇಹಗಳನ್ನು ಬಟ್ಟೆಯಿಂದ ಮುಚ್ಚಿರುವುದನ್ನು ತೋರಿಸುವ ಚಿತ್ರಗಳನ್ನು ಮತ್ತು ವೀಡಿಯೊ ತುಣುಕನ್ನು ಪ್ರಕಟಿಸಿವೆ. ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಗುಂಪು ಹೊತ್ತುಕೊಂಡಿದೆ.
ಕೆಲವು ಸ್ಥಳೀಯ ಮಾಧ್ಯಮಗಳು ಮೂವರು ದಾಳಿಕೋರರು ಭಾಗಿಯಾಗಿದ್ದಾರೆ ಎಂದು ವರದಿ ಮಾಡಿದೆ.
ಸ್ಥಳೀಯ ಪೊಲೀಶ್ ಮುಖ್ಯಸ್ಥ ಕಜೆಮ್ ಮೌಸವಿ ರಾಜ್ಯ ದೂರದರ್ಶನಕ್ಕೆ "ಈ ದಾಳಿಯಲ್ಲಿ ಒಬ್ಬ ಭಯೋತ್ಪಾದಕ ಮಾತ್ರ ಭಾಗಿಯಾಗಿದ್ದಾನೆ" ಎಂದು ಹೇಳಿದ್ದಾರೆ
ಶಾ ಚೆರಾಗ್ ಸಮಾಧಿಯು ಎಂಟನೇ ಶಿಯಾ ಇಮಾಮ್ ಇಮಾಮ್ ರೆಜಾ ಅವರ ಸಹೋದರ ಅಹ್ಮದ್ ಅವರ ಸಮಾಧಿಗೆ ನೆಲೆಯಾಗಿದೆ ಮತ್ತು ಇದನ್ನು ದಕ್ಷಿಣ ಇರಾನ್ನ ಅತ್ಯಂತ ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ.