ಜಕಾರ್ತಾ, ಅ 27 (DaijiworldNews/HR): ಮಹಿಳೆಯನ್ನು ಬರೋಬ್ಬರಿ 16 ಅಡಿ ಉದ್ದದ ಹೆಬ್ಬಾವು ನುಂಗಿದ್ದು, ಸ್ಥಳೀಯರು ಹೆಬ್ಬಾವಿನ ಹೊಟ್ಟೆಯನ್ನು ಸೀಳಿದಾಗ ಶವ ಪತ್ತೆಯಾಗಿರುವ ಘಟನೆ ಇಂಡೋನೇಷ್ಯಾದ ಜಾಂಬಿ ಪ್ರದೇಶದಲ್ಲಿ ನಡೆದಿದೆ.
ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಕೆಲಸ ಮಾಡಲು ತೆರಳಿದ್ದ ಜಹ್ರಾಹ್ (52ವರ್ಷ) ಎಂಬ ಮಹಿಳೆ ನಾಪತ್ತೆಯಾಗಿದ್ದು, ಈ ಬಗ್ಗೆ ಜಹ್ರಾಹ್ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು.
ಇನ್ನು ಮಹಿಳೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದ ಸ್ಥಳೀಯರಿಗೆ ಭಾರೀ ಗಾತ್ರದ ದೊಡ್ಡ ಹೊಟ್ಟೆಯ ಹೆಬ್ಬಾವು ಪತ್ತೆಯಾಗಿದ್ದು, ಹೆಬ್ಬಾವಿನ ಹೊಟ್ಟೆಯನ್ನು ಗಮನಿಸಿದ ಸ್ಥಳೀಯರಿಗೆ ಮನುಷ್ಯನನ್ನು ನುಂಗಿರುವ ಬಗ್ಗೆ ಸಂಶಯಗೊಂಡು, ಹೆಬ್ಬಾವನ್ನು ಕೊಡಲಿಯಿಂದ ತುಂಡರಿಸಿದಾಗ ನಾಪತ್ತೆಯಾಗಿದ್ದ ಮಹಿಳೆಯ ಶವ ಪತ್ತೆಯಾಗಿರುವುದಾಗಿ ವರದಿಯಾಗಿದೆ.