ವಾಷಿಂಗ್ಟನ್, ನ 02 (DaijiworldNews/HR): ಟ್ವಿಟರ್ನಲ್ಲಿ ಬ್ಲೂಟಿಕ್ ಹೊಂದಲು ಹಾಗೂ ಅದನ್ನು ಬಳಕೆ ಮಾಡಲು ಒಂದು ತಿಂಗಳಿಗೆ 1,600 ರೂ. ಶುಲ್ಕ ವಿಧಿಸುವ ಮಾಲೀಕ ಎಲಾನ್ ಮಸ್ಕ್ ನಿರ್ಧಾರಕ್ಕೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಶುಲ್ಕನ್ನು 650 ರೂ.ಗೆ ಇಳಿಕೆ ಮಾಡಲಾಗಿದೆ.
ಟ್ವಿಟರ್ನ ನಿರ್ದೇಶಕರ ಮಂಡಳಿಯನ್ನು ಬರ್ಖಾಸ್ತುಗೊಳಿಸಿರುವ ಎಲಾನ್ ಮಸ್ಕ್, ತಮ್ಮನ್ನು ತಾವೇ ಸಿಇಒ ಆಗಿ ನೇಮಕ ಮಾಡಿಕೊಂಡಿದ್ದು, ಟ್ವಿಟರ್ನಲ್ಲಿ ಬ್ಲೂಟಿಕ್ ಹೊಂದಲು ಹಾಗೂ ಬಳಕೆ ಮಾಡಲು ಶುಲ್ಕ ವಿಧಿಸಿದ ಕ್ರಮವನ್ನು ಸಾಹಿತಿ ಸ್ಟಿಫನ್ ಕಿಂಗ್ ಸೇರಿದಂತೆ ಅನೇಕರು ಖಂಡಿಸಿದ್ದಾರೆ.
ಇನ್ನು ಕೇವಲ ಜಾಹೀರಾತುಗಳಿಂದಲೇ ಕಂಪನಿಯನ್ನು ನಿಭಾಯಿಸುವುದು ಕಷ್ಟ. ಆದರೂ 20 ಅಮೆರಿಕನ್ ಡಾಲರ್ ಬದಲಾಗಿ ಶುಲ್ಕವನ್ನು 8 ಡಾಲರ್ಗೆ ತಗ್ಗಿಸುತ್ತೇವೆ ಎಂದು ಮಸ್ಕ್ ತಿಳಿಸಿದ್ದಾರೆ.
ಟ್ವಿಟರ್ನಲ್ಲಿ ಇತರ ಕಂಪನಿಗಳ ಉದ್ಯೋಗಿಗಳಿಗೆ ಸಾಮಾಜಿಕ ಮಾಧ್ಯಮ ದೈತ್ಯದಲ್ಲಿ ಕೆಲಸ ಮಾಡಲು ಮಸ್ಕ್ ಅಧಿಕಾರ ನೀಡಿದ್ದಾರೆ ಎಂದು ವರದಿಯಾಗಿದ್ದು, ಇವುಗಳಲ್ಲಿ ಟೆಸ್ಲಾದಿಂದ 50 ಉದ್ಯೋಗಿಗಳು ಸೇರಿದ್ದಾರೆ. ಹೆಚ್ಚಾಗಿ ಆಟೋಪೈಲಟ್ ತಂಡದಿಂದ, ಬೋರಿಂಗ್ ಕಂಪನಿಯಿಂದ ಇಬ್ಬರು ಮತ್ತು ನ್ಯೂರಾಲಿಂಕ್ನಿಂದ ಒಬ್ಬರು, ಆಂತರಿಕ ದಾಖಲೆಗಳನ್ನು ಪರಿಶೀಲಿಸಲಾಗಿದೆ ಎನ್ನಲಾಗಿದೆ.