ನವದೆಹಲಿ, ನ 08 (DaijiworldNews/HR): ವಿಶ್ವದ ಜನಸಂಖ್ಯೆಯು ನವೆಂಬರ್ 15ರ ಹೊತ್ತಿಗೆ 8 ಬಿಲಿಯನ್ (800 ಕೋಟಿ) ತಲುಪಲಿದ್ದು, 2023 ರ ಹೊತ್ತಿಗೆ ಜನಸಂಖ್ಯೆಯಲ್ಲಿ ಭಾರತವು ಚೀನಾವನ್ನು ಹಿಂದಿಕ್ಕುತ್ತದೆ ಎಂದು ವಿಶ್ವಸಂಸ್ಥೆಯು ವರದಿ ಮಾಡಿದೆ.
ವಿಶ್ವಸಂಸ್ಥೆಯು ವಿಶ್ವ ಜನಸಂಖ್ಯಾ ಸಾಮರ್ಥ್ಯ 2022ರಲ್ಲಿ ಇದನ್ನು ಉಲ್ಲೇಖಿಸಿದ್ದು, ಈ ವರ್ಷದ ನವೆಂಬರ್ 15 ರಂದು ವಿಶ್ವದ ಜನಸಂಖ್ಯೆ 800 ಕೋಟಿಯನ್ನು ಮುಟ್ಟುವ ಸಾಧ್ಯತೆ ಇದೆ ಎಂದು ಹೇಳಿದೆ.
ಇನ್ನು ವಿಶ್ವದ ಜನಸಂಖ್ಯೆಯ ಅತ್ಯುನ್ನತ ಮಟ್ಟವು 2080ರ ದಶಕದಲ್ಲಿ ಬರಬಹುದು ಎಂದು ತಜ್ಞರು ಹೇಳಿದ್ದು, ಆ ಸಮಯದಲ್ಲಿ ವಿಶ್ವದ ಜನಸಂಖ್ಯೆ ಸುಮಾರು 10.40 ಬಿಲಿಯನ್ ಆಗಿರುತ್ತದೆ. ಈ ಮಟ್ಟವನ್ನು 2100 ರವರೆಗೆ ನಿರ್ವಹಿಸಬಹುದು.
ಕೊರೊನಾ ಸಾಂಕ್ರಾಮಿಕ ರೋಗದ ಪರಿಣಾಮವು ಜನಸಂಖ್ಯೆಯ ಜನಸಂಖ್ಯೆಯ ಮೇಲೆಯೂ ಕಂಡುಬಂದಿದೆ ಎನ್ನಲಾಗಿದೆ.