ಪಾಕಿಸ್ತಾನ, ನ 08 (DaijiworldNews/DB): ಪ್ರೀತಿಗೆ ವಯಸ್ಸಿನ ಹಂಗಿಲ್ಲ. ಅದ್ಯಾವ ಕ್ಷಣದಲ್ಲೂ ಯಾರೋ, ಇನ್ಯಾರೊಂದಿಗೋ ಪ್ರೀತಿಯಲ್ಲಿ ಬೀಳಬಹುದು. ಅಂದ ಹಾಗೆ, 28 ವರ್ಷದ ಪಾಕಿಸ್ತಾನದ ಯುವಕನೊಬ್ಬ ಪೋಲೆಂಡ್ನ 83 ವರ್ಷದ ವೃದ್ದೆಯನ್ನು ಮದುವೆಯಾಗುವ ಮೂಲಕ ಸುದ್ದಿಯಾಗಿದ್ದಾನೆ.
ಹಫೀಜ್ ಮಹಮ್ಮದ್ ನದೀಮ್ ಎಂಬ ಪಾಕಿಸ್ತಾನದ 28 ವರ್ಷದ ಯುವಕ ಪೋಲೆಂಡ್ನ 83 ವರ್ಷದ ಅಜ್ಜಿ ಬ್ರೋಮಾ ಎಂಬಾಕೆಯನ್ನು ಮದುವೆಯಾಗಿದ್ದಾರೆ. ಇವರಿಬ್ಬರೂ ಇಸ್ಲಾಮಿಕ್ ಕಾನೂನಿನಡಿ ಒಪ್ಪಿಗೆ ಪಡೆದು ಇಸ್ಲಾಂ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದು, ಬ್ರೋಮಾ ತನ್ನ ಹೆಸರನ್ನು ಫಾತಿಮಾ ಎಂಬುದಾಗಿ ಬದಲಾಯಿಸಿಕೊಂಡಿದ್ದಾರೆ.
ಆರು ವರ್ಷದ ಹಿಂದೆ ನದೀಮ್ ಹಾಗೂ ಬ್ರೋಮಾ ಫೇಸ್ಬುಕ್ನಲ್ಲಿ ಪರಿಚಿತರಾದರು. ಬಳಿಕ ಇಬ್ಬರ ನಡುವೆ ಸಂದೇಶಗಳು ವಿನಿಮಯಗೊಂಡಿದ್ದು, ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಯಾಗಿ ಮೊಳಕೆಯೊಡೆದಿದೆ. ಪ್ರೀತಿ ಇದೀಗ ಮದುವೆ ಮೂಲಕ ಹೊಸ ಜೀವನಕ್ಕೆ ಕಾರಣವಾಗಿದೆ.
ಅಷ್ಟಕ್ಕೂ ನದೀಮ್ ಹಾಗೂ ಬ್ರೋಮಾ ಮದುವೆಗೂ ಮೊದಲು ಒಮ್ಮೆಯೂ ಒಬ್ಬರನ್ನೊಬ್ಬರು ಭೇಟಿಯಾಗಿಲ್ಲವಂತೆ. ನದೀಮ್ ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿದ್ದಾನೆ.