ಅಮೆರಿಕ, ನ 09 (DaijiworldNews/DB): ಮೇರಿಲ್ಯಾಂಡ್ ಲೆಫ್ಟಿನೆಂಟ್ ಗವರ್ನರ್ ಆಗಿ ಭಾರತೀಯ ಅಮೆರಿಕನ್ ಅರುಣಾ ಮಿಲ್ಲರ್ ಆಯ್ಕೆಯಾಗಿದ್ದಾರೆ.
ಮೇರಿಲ್ಯಾಂಡ್ ಮಾಜಿ ಪ್ರತಿನಿಧಿ ಡೆಮಾಕ್ರೆಟಿಕ್ ಗವರ್ನರ್ ಚುನಾಯಿತ ವೆಸ್ ಮೂರ್ ಅವರ ವಿರುದ್ದ ಸ್ಪರ್ಧಿಸಿದ ಅರುಣಾ ಮಿಲ್ಲರ್ ಅವರನ್ನು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಇಬ್ಬರೂ ಪ್ರಚಾರ ಸಮಯದಲ್ಲಿ ಬೆಂಬಲ ಸೂಚಿಸಿದ್ದರು. ಈ ಚುನಾವಣೆಯಲ್ಲಿ ತೀವ್ರ ಪೈಪೋಟಿ ಜೊತೆಗೆ, ಪ್ರಚಾರಕ್ಕಾಗಿ ಮಿಲ್ಲರ್ ಹಿಂದೂ ರಾಷ್ಟ್ರೀಯವಾದಿಗಳನ್ನು ನೇಮಕ ಮಾಡಿಕೊಂಡಿದ್ದಾರೆಂಬ ಆರೋಪವೂ ಕೇಳಿ ಬಂದಿತ್ತು. ಆದರೆ ಗೆಲುವು ಸಾಧಿಸಿ ಲೆಫ್ಟಿನೆಂಟ್ ಗವರ್ನರ್ ಆಗಿ ಆಯ್ಕೆಯಾಗುವ ಮೂಲಕ ಎಲ್ಲಾ ಆರೋಪಗಳಿಗೆ ಅವರು ಸವಾಲೊಡ್ಡಿದ್ದಾರೆ.
ರಾಜ್ಯಪಾಲರ ಗೈರಿನಲ್ಲಿ ಅಥವಾ ಸೇವೆಗೆ ಅಲಭ್ಯರಾದಾಗ ರಾಜ್ಯದ ಎರಡನೇ ಅತ್ಯುನ್ನತ ಚುನಾಯಿತ ಅಧಿಕಾರಿಯಾಗಿ ಲೆಫ್ಟಿನೆಂಟ್ ಗವರ್ನರ್ ಅಧಿಕಾರ ನಿಭಾಯಿಸುತ್ತಾರೆ. ಆಂಧ್ರಪ್ರದೇಶ ಮೂಲದ ಅರುಣಾ ಮಿಲ್ಲರ್ ಪೋಷಕರೊಂದಿಗೆ ಯುಎಸ್ಗೆ ವಲಸೆ ಹೋಗಿ ಅಲ್ಲಿಯೇ ನೆಲೆಸಿದ್ದರು.